ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕ್ಯಾರೆಟ್ ಹಾಕಿ
ನಂತರ ಸಬಸಿಗೆ ಸೊಪ್ಪು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ
ನಂತರ ಉಪ್ಪು ನೀರು ಹಾಕಿ ಕುದಿಸಿ
ಕುದ್ದ ನಂತರ ಇದಕ್ಕೆ ಒಂದು ಬೌಲ್ ಅಕ್ಕಿ ಹಿಟ್ಟು, ಒಂದು ಬೌಲ್ ರಾಗಿ ಹಿಟ್ಟು ಹಾಗೂ ಒಂದು ಬೌಲ್ ಜೋಳದ ಹಿಟ್ಟು ಹಾಕಿ ಮಿಕ್ಸ್ ಮಾಡಿ
ಬೇಕಿದ್ದಲ್ಲಿ ಗೋಧಿ ಹಿಟ್ಟು ಕೂಡ ಮಿಕ್ಸ್ ಮಾಡಬಹುದು
ನಂತರ ಇದನ್ನು ಮಿಕ್ಸ್ ಮಾಡಿ ಸ್ವಲ್ಪ ಬಿಸಿ ಇದ್ದಂತೆ ಉಂಡೆ ಮಾಡಿಕೊಳ್ಳಿ
ಎಣ್ಣೆ ಹಾಕಿ ತಟ್ಟಿ ಬಿಸಿ ಹಂಚಿಗೆ ಹಾಕಿ ಬೇಯಿಸಿದ್ರೆ ತಾಳಿಪಟ್ಟು ರೆಡಿ