ಮೂಳೆಗಳಿಲ್ಲದ ಚಿಕನ್ – ಅರ್ಧ ಕೆಜಿ
ಮಧ್ಯಮ ಗಾತ್ರದಲ್ಲಿ ಹೆಚ್ಚಿದ ಕ್ಯಾಪ್ಸಿಕಮ್ – 1
ಕೊತ್ತಂಬರಿ ಸೊಪ್ಪು – 2
ಹೆಚ್ಚಿದ ಸ್ಪ್ರಿಂಗ್ ಆನಿಯನ್ – 2
ಮಧ್ಯಮ ಗಾತ್ರದಲ್ಲಿ ಕತ್ತರಿಸಿದ ಈರುಳ್ಳಿ – 1
ಕೊಚ್ಚಿದ ಬೆಳ್ಳುಳ್ಳಿ – 1 ಟೀಸ್ಪೂನ್
ಸೋಯಾ ಸಾಸ್ – ಕಾಲು ಕಪ್
ಚಿಕನ್ ಸ್ಟಾಕ್ – ಕಾಲು ಕಪ್
ಕರಿಮೆಣಸಿನ ಪುಡಿ – 1 ಟೀಸ್ಪೂನ್
ಎಳ್ಳಿನ ಎಣ್ಣೆ – 1 ಟೀಸ್ಪೂನ್
ಸಕ್ಕರೆ – ಅರ್ಧ ಟೀಸ್ಪೂನ್
ಕಾರ್ನ್ಫ್ಲೋರ್ – 2 ಟೀಸ್ಪೂನ್
ಎಣ್ಣೆ – ಒಂದೂವರೆ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮೊದಲಿಗೆ ಚಿಕನ್ ಅನ್ನು ಸ್ವಚ್ಛಗೊಳಿಸಿ, ಬೈಟ್ಸ್ ಗಾತ್ರದಲ್ಲಿ ಕತ್ತರಿಸಿಕೊಳ್ಳಿ.
ಅದಕ್ಕೆ ಅರ್ಧ ಟೀಸ್ಪೂನ್ ಕರಿಮೆಣಸಿನ ಪುಡಿ, 2 ಟೀಸ್ಪೂನ್ ಸೋಯಾ ಸಾಸ್, ಉಪ್ಪು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮ್ಯಾರಿನೇಟ್ ಆಗಲು ಪಕ್ಕಕ್ಕೆ ಇಡಿ.
ಒಂದು ಬಟ್ಟಲಿನಲ್ಲಿ ಉಳಿದ ಸೋಯಾ ಸಾಸ್, ಎಳ್ಳಿನ ಎಣ್ಣೆ, ಚಿಕನ್ ಸ್ಟಾಕ್, ಉಳಿದ ಕರಿಮೆಣಸಿನ ಪುಡಿ ಸೇರಿಸಿ ಬೆರೆಸಿಕೊಳ್ಳಿ.
ಇನ್ನೊಂದು ಪಿಂಗಣಿಯಲ್ಲಿ ಕಾರ್ನ್ ಫ್ಲೋರ್ ಹಾಗೂ ಅದಕ್ಕೆ ಸ್ವಲ್ಪ ನೀರು ಬೆರೆಸಿ, ಮಿಶ್ರಣ ಮಾಡಿ ಸ್ಲರಿ ತಯಾರಿಸಿ. ಇದನ್ನು ಸಾಸ್ ಮಿಶ್ರಣಕ್ಕೆ ಸೇರಿಸಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಸೇರಿಸಿ, ಹುರಿದುಕೊಳ್ಳಿ.
ಚಿಕನ್ ಬೇಯುವ ವೇಳೆ ಈರುಳ್ಳಿ, ಕೊಚ್ಚಿದ ಬೆಳ್ಳುಳ್ಳಿ, ಕ್ಯಾಪ್ಸಿಕಮ್ ಸ್ಪ್ರಿಂಗ್ ಆನಿಯನ್ ಸೇರಿಸಿ 3 ನಿಮಿಷಗಳ ಕಾಲ ಹುರಿಯಿರಿ.
ಅದಕ್ಕೆ ತಯಾರಿಸಿಟ್ಟ ಸಾಸ್ ಬೆರೆಸಿ ಮಿಶ್ರಣ ದಪ್ಪವಾಗುವವರೆಗೆ ಟಾಸ್ ಮಾಡಿ. ಬಳಿಕ ಉರಿಯನ್ನು ಆಫ್ ಮಾಡಿ.