Friday, December 8, 2023

Latest Posts

CHILDCARE | ಮಕ್ಕಳಿಗೆ ನೀರು ಕುಡಿಸೋಕೆ ಸಾಹಸ ಮಾಡ್ತಿದ್ದೀರಾ? ಈ ಟಿಪ್ಸ್ ಫಾಲೋ ಮಾಡಿ ನೋಡಿ..

ಮಕ್ಕಳಿಗೆ ನೀರು ಕುಡಿಸೋದು ಪೋಷಕರಿಗೆ ಸಾಹಸವೇ ಸರಿ, ಮಕ್ಕಳು ಹೆಚ್ಚು ನೀರು ಕುಡಿಯಬೇಕೆಂದ್ರೆ ಕೆಲವೊಂದು ವಿಷಯಗಳನ್ನ ಗಮನದಲ್ಲಿ ಇಡಬೇಕಾಗುತ್ತದೆ. ಈ ರೀತಿ ಮಕ್ಕಳಿಗೆ ನೀರು ಕುಡಿಸಿ..

  • ಮಕ್ಕಳಿಗೆ ನೀರಿನ ರುಚಿ ಅಷ್ಟೇನು ಇಷ್ಟವಾಗೋದಿಲ್ಲ. ಹಾಗಾಗಿ ಹಣ್ಣುಗಳನ್ನು ನೀರಿಗೆ ಹಾಕಿ ಫ್ಲೇವರ್ ನೀಡಿ
  • ಮಕ್ಕಳಿಗೆ ತಮ್ಮದೇ ಆದ ಕಪ್ ನೀಡಿ, ಅದರಲ್ಲಿ ಇಷ್ಟು ಸಮಯಕ್ಕೊಮ್ಮೆ ನೀರು ಕುಡಿಯಲೇಬೇಕು ಎನ್ನುವ ರೂಲ್ಸ್ ಹಾಕಿ
  • ಮಕ್ಕಳಿಗೆ ಫೋರ್ಸ್ ಮಾಡುವ ಬದಲು ಅವರ ಎದುರು ನೀವು ಸದಾ ನೀರು ಕುಡಿಯಿರಿ, ನೀರು ಕುಡಿಯುವುದು ಯಾಕೆ ಒಳ್ಳೆಯದು ಮಾತನಾಡಿ.
  • ಮಕ್ಕಳ ಬಾಟಲಿ ಎಲ್ಲಿಗೆ ಹೋದರೂ ತೆಗೆದುಕೊಂಡು ಹೋಗಿ, ಕೆಲವೊಮ್ಮೆ ಅವರಿಷ್ಟದ ಬಾಟೆಲ್ ಇಲ್ಲದೆ ನೀರು ಬೇಡ ಎನ್ನುವ ಚಾನ್ಸ್ ಇದೆ.
  • ನೀರು ಹೆಚ್ಚು ಕುಡಿಸಲು ಎನ್‌ಕರೇಜ್ ಮಾಡಿ, ಜ್ಯೂಸ್, ಸ್ಮೂತಿ ಹೀಗೆ ಎಲ್ಲದರಲ್ಲೂ ನೀರು ಹಾಕಿ ಕುಡಿಸಿ.
  • ಮಕ್ಕಳಿಗೆ ಕಾಫಿ, ಟೀ, ಕೋಲ್ಡ್ ಡ್ರಿಂಕ್ ಅಭ್ಯಾಸ ಮಾಡಿಸಬೇಡಿ, ಇದರಿಂದಾಗಿ ನೀರಿನ ಮೇಲೆ ಆಸಕ್ತಿ ಹೋಗಿ ಅದು ಸಪ್ಪೆ ಎನಿಸುತ್ತದೆ.
  • ಚೆನ್ನಾಗಿ ಸುಸ್ತಾಗುವಂಥ ಆಟಗಳನ್ನು ಆಡಲು ಬಿಡಿ, ಬಾಯಾರಿಕೆಗೆ ನೀರು ಕುಡಿದೇ ಕುಡಿಯುತ್ತಾರೆ.
  • ನೀರು ಕುಡಿದರೆ ಇದನ್ನು ಕೊಡುತ್ತೇವೆ ಎಂದು ಅವರಿಷ್ಟದ ವಸ್ತುವನ್ನು ಬಹುಮಾನವಾಗಿ ಇಡಿ.
  • ನೀರಿನಾಂಶ ಹೆಚ್ಚಿರುವ ತರಕಾರಿ, ಹಣ್ಣುಗಳನ್ನು ಮಕ್ಕಳಿಗೆ ನೀಡಿ.
  • ಚಂದದ ಬಾಟಲಿಗಳು, ಲೋಟಗಳು ಹಾಗೂ ಸ್ಟ್ರಾಗಳನ್ನು ಕೊಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!