ಹಾವೇರಿ ಅಪಘಾತ: ಇಂಥಾ ಆಕ್ಸಿಡೆಂಟ್‌ ನೋಡೇ ಇಲ್ಲ, ಮಗು ಅಮ್ಮಾ ಅಂತ ಅಳ್ತಿತ್ತು ಎಂದ ಆಂಬುಲೆನ್ಸ್‌ ಡ್ರೈವರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಶಿವಮೊಗ್ಗದ ಭದ್ರಾವತಿಯ 13 ಮಂದಿ ಮೃತಪಟ್ಟಿದ್ದಾರೆ.

ಟಿಟಿಯೊಂದು ನಿಂತಿದ್ದ ಲಾರಿಗೆ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಜನರ ಪ್ರಾಣವೇ ಹೋಗಿದೆ. ಪ್ರತ್ಯಕ್ಷದರ್ಶಿಗಳು ಆಂಬುಲೆನ್ಸ್‌ಗೆ ಕರೆ ಮಾಡಿದ್ದು, ಆಂಬುಲೆನ್ಸ್‌ ಡ್ರೈವರ್‌ ಅಪಘಾತದ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.

ನೋಡಲು ಭಯಾನಕವಾಗಿತ್ತು. ಗಾಡಿಯೊಳಗೆ ಸಿಲುಕಿಕೊಂಡವರು ನರಳಾಡುತ್ತಿದ್ದರು. ಕೂಡಲೇ ಎರಡು ಆ್ಯಂಬುಲೆನ್ಸ್ ಸಿಬ್ಬಂದಿ ಬಂದಿದ್ವಿ. ಹಿಂದಿನಿಂದ ಬಂದು ನೋಡಿದಾಗ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ಕೊನೆಗೆ ಹಿಂಬದಿಯ ಸೀಟ್​​ ಅನ್ನು ಮುರಿದು ರಕ್ಷಣೆ ಮಾಡಿದೇವು. ಆದರೂ ಒಳಗಡೆ ಒಂದು ಪಾಪಿ ಹಾಗೂ ಇನ್ನಿಬ್ಬರು ಸಿಕ್ಕಿಹಾಕಿಕೊಂಡಿದ್ದರು. ಪಾಪು ನೋವಿನಿಂದ ಅಮ್ಮ ಅಮ್ಮ ಎನ್ನುತ್ತಿತ್ತು. ಕೂಡಲೇ ಆತನನ್ನು ಹೊರಗೆ ತೆಗೆದು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದ್ವಿ. ಮಗುವನ್ನು ಅಡ್ಮಿಟ್‌ ಮಾಡಿ ಮತ್ತೆ ವಾಪಾಸ್‌ ಬಂದ್ವಿ, ಮಕ್ಕಳು, ಮಹಿಳೆಯರು ಪುರುಷರು ಗಾಡಿಯಲ್ಲಿ ಸೀಟ್‌ಗಳಡಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದರು. ಅವರನ್ನು ನೋಡಿ ಕಣ್ಣೀರು ಬಂತು. ಅಪಘಾತಗಳೇ ಆಗ್ಬಾರ್ದು ಎಂದು ಡ್ರೈವರ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!