ಹೊಸದಿಗಂತ ವರದಿ, ಹಾವೇರಿ:
ಟ್ರ್ಯಾಕ್ಟರ್ ರೋಟರ್ ಗೆ ಸಿಲುಕಿದ್ದ ಕಸ ತೆಗೆಯಲೆಂದು ಹೋದ ಯುವಕ, ಅದರಲ್ಲಿ ಸಿಲುಕಿ ಚಿಂದಿಯಾಗಿ ಸಾವನ್ನಪ್ಪಿದ ಧಾರುಣ ಘಟನೆ ತಾಲೂಕಿನ ನೆಗಳೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮೃತನನ್ನು ನೆಗಳೂರ ಗ್ರಾಮದ ಪ್ರಕಾಶ್ ಚಂದ್ರಶೇಖರಪ್ಪ ಶಿಡೇನೂರ(40) ಎಂದು ಗುರುತಿಸಲಾಗಿದೆ.. ತಮ್ಮ ಜಮೀನಿನಲ್ಲಿ ರೋಟರ್ ಹೊಡೆಯುತ್ತಿದ್ದ ವೇಳೆ ರೋಟರ್ ನಲ್ಲಿ ಸಿಲುಕಿದ ಕಸ ತೆಗೆಯಲು ಹೋದಾಗ ಈ ಅವಘಡ ಸಂಬವಿಸಿದೆ.
ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

