April 22, 2026
Wednesday, April 22, 2026
spot_img

ದಕ್ಷಿಣ ಕನ್ನಡದಲ್ಲಿ ಶಾಕಿಂಗ್ ಘಟನೆ: ಸಿಡಿಮದ್ದು ತಯಾರಿಕಾ ಘಟಕದಲ್ಲಿ ದಿಢೀರ್ ಸ್ಫೋಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡದ ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ನೂಜಿಯಲ್ಲಿ ಕಾರ್ಯಾಚರಿಸುತ್ತಿದ್ದ ಸಿಡಿಮದ್ದು ತಯಾರಿಕಾ ಘಟಕದಲ್ಲಿ ರಾಸಾಯನಿಕ ಮಿಶ್ರಣದಲ್ಲಿ ಸಮಸ್ಯೆಯಾಗಿ ಸ್ಫೋಟ ಸಂಭವಿಸಿದೆ .

ಖಾಸಗಿ ವ್ಯಕ್ತಿಗೆ ಸೇರಿದ ಜಾಗದಲ್ಲಿ ಸಿಡಿಮದ್ದು ತಯಾರಿಕೆಯನ್ನು ನಡೆಸಲಾಗುತ್ತಿತ್ತು. ಘಟಕದಲ್ಲಿ ಸಿಡಿಮದ್ದಿಗೆ ಬೇಕಾದ ರಾಸಾಯನಿಕವನ್ನು ಮಿಶ್ರಣ ಮಾಡಿ ಕಾರ್ಮಿಕರು ಸಂಜೆಯ ಕಾಫಿ ಕುಡಿಯುದಕ್ಕೆ ತೆರಳುತ್ತಿದ್ದ ಸಂದರ್ಭ ಏಕಾಏಕಿ ಘಟಕ ಸ್ಫೋಟಗೊಂಡಿದೆ. ಸ್ಪೋಟದ ತೀವ್ರತೆಗೆ ೫ ಸೆಂಟ್ಸ್ ಜಾಗ ಸಂಪೂರ್ಣ ಹಾನಿಯಾಗಿದೆ. ಆದರೆಯಾವುದೇ ಜೀವ ಹಾನಿಯಾಗಿಲ್ಲ.

ಬೆಂಕಿ ಹರಡದಂತೆ ತಕ್ಷಣ ನೀರು ಸುರಿದು, ಬೆಂಕಿ ಆರಿಸುವ ಕಾರ್ಯವನ್ನು ಮಾಡಲಾಗಿದೆ. ಆಸುಪಾಸಿನ ಕೆಲವು ಮನೆಗಳಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

೨೦೧೭ರಲ್ಲಿ ನಡೆದಿತ್ತು ಸ್ಪೋಟ!
೨೦೧೭ ಮಾ. ೨೦ರಂದು ಸಂಜೆ ಸಮಯ ಅಮೋನಿಯಮ್ ನೈಟ್ರೇಟ್ ಹಾಗೂ ಗಂಧಕದ ಮಿಶ್ರಣ ಮಾಡುತ್ತಿದ್ದ ಸಂದರ್ಭ ಏಕಾಏಕಿ ಸ್ಪೋಟಗೊಂಡು ಸ್ಥಳದಲ್ಲಿದ್ದ ಎರಡು ಮಂದಿ ಕಾರ್ಮಿಕರು ಛಿದ್ರಗೊಂಡಿದ್ದರು. ಹಲವು ಮನೆ, ಅಂಗಡಿ ಸೇರಿ ದೂರದ ವಿಟ್ಲದಲ್ಲಿ ಹಾನಿಗೊಳಗಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !