ರಷ್ಯಾದೊಂದಿಗೆ ರೂಪಾಯಿ ವ್ಯಾಪಾರಕ್ಕೆ HDFC, ಕೆನರಾ ಬ್ಯಾಂಕ್ ಗೆ ಸಿಕ್ಕಿತು RBI ಅನುಮತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾದೊಂದಿಗೆ ರೂಪಾಯಿಗಳಲ್ಲಿ ವ್ಯಾಪಾರಕ್ಕಾಗಿ HDFC ಬ್ಯಾಂಕ್ ಲಿಮಿಟೆಡ್ ಮತ್ತು ಕೆನರಾ ಬ್ಯಾಂಕ್ ಲಿಮಿಟೆಡ್’ಗೆ ವಿಶೇಷ ‘ವೋಸ್ಟ್ರೋ ಖಾತೆ'( vostro account) ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮತಿ ನೀಡಿದೆ.

ವೋಸ್ಟ್ರೋ ಖಾತೆಗಳು ಒಂದು ಬ್ಯಾಂಕ್ ವಿದೇಶಿ ಬ್ಯಾಂಕಿನ ಪರವಾಗಿ ಹೊಂದಿರುವ ಖಾತೆಗಳಾಗಿವೆ ಮತ್ತು ಇದು ಕರೆಸ್ಪಾಂಡೆಂಟ್ ಬ್ಯಾಂಕಿಂಗ್’ಗೆ ಪ್ರಮುಖ ಭಾಗವಾಗಿದೆ.

ಈವರೆಗೆ= ಐದು ಭಾರತೀಯ ಬ್ಯಾಂಕುಗಳುಅನುಮತಿಯನ್ನು ಪಡೆದಿವೆ. ಇವುಗಳಲ್ಲಿ ಯುಕೋ ಬ್ಯಾಂಕ್, ಯೂನಿಯನ್ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಇತರ ಮೂರು ಸೇರಿವೆ.

ಇದಲ್ಲದೆ, ರಷ್ಯಾದ ಎರಡು ಬ್ಯಾಂಕುಗಳು ಸೆಂಟ್ರಲ್ ಬ್ಯಾಂಕಿನ ಅನುಮೋದನೆಯನ್ನ ಹೊಂದಿವೆ. ಅವುಗಳೆಂದ್ರೆ, ಸ್ಬರ್ ಬ್ಯಾಂಕ್ ಮತ್ತು ವಿಟಿಬಿ. ಎರಡೂ ಭಾರತದಲ್ಲಿ ಶಾಖೆ ಉಪಸ್ಥಿತಿಯನ್ನು ಹೊಂದಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!