HDFCಯ ನೂರು ಖಾತೆಗಳಿಗೆ 13.5 ಕೋಟಿ ಹಣ ವರ್ಗಾವಣೆ, ಏನಿದರ ಮರ್ಮ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೆನ್ನೈನ  ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರು ಮೊಬೈಲ್‌ಗೆ ಬಂದ ಸಂದೇಶ ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಯಾವುದೇ ಮಾಹಿತಿಯಿಲ್ಲದೆ ಇದ್ದಕ್ಕಿದ್ದಂತೆ ನೂರು ಜನರ ಖಾತೆಗೆ 10 ಸಾವಿರದಿಂದ 50 ಲಕ್ಷ ರೂಪಾಯಿವರೆಗೆ ಹಣ ಜಮಾವಣೆಯಾಗಿದೆ. ಖಾತೆಗೆ ಹಣ ಜಮೆಯಾಗಿದೆ ಎಂದು ಮೊಬೈಲ್ ಗೆ ಸಂದೇಶ ಬಂದಿದ್ದೇ ತಡ, ಹಣ ಪಡೆದವರೆಲ್ಲ ಒಮ್ಮೆಲೆ ಗೊಂದಲಕ್ಕೊಳಗಾಗಿದ್ದಾರೆ. ಹಣ ಎಲ್ಲಿಂದ ಬಂದಿದ್ದು ಎಂದು ತಿಳಿಯದೆ ತಲೆಕೆಡೆಸಿಕೊಂಡರು. ಕೆಲ ಸಮಯದ ಬಳಿಕ ಅಕೌಂಟ್‌ ಚೆಕ್‌ ಮಾಡಿದ ಗ್ರಾಹಕರು ಹಣ ಬಂದಿರುವುದು ದೃಢವಾದ ಕೂಡಲೇ ನಗದು ಡ್ರಾ ಮಾಡಿದ್ದಾರೆ.

ಇದೆಲ್ಲದಕ್ಕೂ ಮೂಲ ಕಾರಣ ಬ್ಯಾಂಕ್‌ ಸಿಬ್ಬಂದಿ. ಒಬ್ಬರಲ್ಲ ಇಬ್ಬರಲ್ಲ ಸುಮಾರು ನೂರು ಖಾತೆಗಳಿಗೆ ಒಟ್ಟು 13.5 ಕೋಟಿ ರೂ. ಹಣ ವರ್ಗಾವಣೆ ಆಗಿದೆ. ವಿಷಯ ತಿಳಿದ ಬ್ಯಾಂಕ್ ಸಿಬ್ಬಂದಿ ನಾಲಿಗೆ ಕಚ್ಚಿಕೊಂಡಿದ್ದಾರೆ. ಬ್ಯಾಂಕ್ ನ ಸರ್ವರ್‌ನಲ್ಲಿ ಹೊಸ ಸಾಫ್ಟ್ ವೇರ್ ಅಳವಡಿಸಿದ್ದೇ ಈ ಘಟನೆಗೆ ಕಾರಣ ಎಂಬುದನ್ನು ಕಂಡುಕೊಂಡರು. ಕೂಡಲೇ ಬ್ಯಾಂಕ್ ಸಿಬ್ಬಂದಿ ಹಣ ವರ್ಗಾವಣೆಯಾದ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ. ಅಷ್ಟರಲ್ಲಾಗಲೇ ಕೆಲ ಗ್ರಾಹಕರು ಹಣ ಡ್ರಾ ಮಾಡಿದ್ದಾರೆ. ಗ್ರಾಹಕರ ಪುಟದಲ್ಲಿ ವಿವರಗಳನ್ನು ನವೀಕರಿಸುವಾಗ ಕ್ರೆಡಿಟ್ ಪೇಜ್‌ನಲ್ಲಿ ಗೊಂದಲ ಉಂಟಾಗಿದೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಘಟನೆ ಸಂಬಂಧ ಫೆಡರಲ್‌ ಕ್ರಿಮಿನಲ್‌ ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!