ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ಜೀವನ, ಬಾಳ ಸಂಗಾತಿ, ಮಕ್ಕಳು, ತುಂಬು ಬದುಕನ್ನು ನೋಡಬೇಕಿದ್ದ ವ್ಯಕ್ತಿಯೊಬ್ಬ ತನ್ನ ಮದುವೆಗೆ ಒಂದೇ ದಿನ ಇದೆ ಎನ್ನುವಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜುಂಜರವಾಡ ಗ್ರಾಮದ ಸದಾಶಿವ ರಾಮಪ್ಪ (31) ಹೋಸಲ್ಕಾರ ಮೃತರು. ನಾಳೆ ಸದಾಶಿವ ಅವರ ಮದುವೆ ನಡೆಯಬೇಕಿತ್ತು, ಮನೆಯ ತುಂಬಾ ನೆಂಟರು ಇದ್ದು, ಮದುವೆಗೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದರು.
ಸದಾಶಿವ ಫೋನ್‌ನಲ್ಲಿ ಮಾತನಾಡುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ತೀವ್ರ ಹೃದಯಾಘಾತದಿಂದ ಸದಾಶಿವ ಮೃತಪಟ್ಟಿದ್ದಾರೆ.