ಆತ ಎಸ್‌ಎಸ್‌ಎಲ್‌ಸಿ, ನನ್ನ ಮಗಳು ಮಾಸ್ಟರ್‌ ಡಿಗ್ರಿ! ಡಿವೋರ್ಸ್‌ ಬಗ್ಗೆ ಯುವ ಮಾವನ ರಿಯಾಕ್ಷನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಚೆಗೆ ಸಿನಿಮಾ ರಂಗದಲ್ಲಿ ಡಿವೋರ್ಸ್‌ ಸಾಮಾನ್ಯ ಎನ್ನುವಂತಾಗಿದ್ದು, ಡಿವೋರ್ಸ್‌ ನಟರ ಸಾಲಿಗೆ ಯುವ ಕೂಡ ಸೇರಿಕೊಂಡಿದ್ದಾರೆ.

ಪತ್ನಿ ಶ್ರೀದೇವಿಗೆ ಅನೈತಿಕ ಸಂಬಂಧ ಇತ್ತು, ಅವರು ರಾಜ್​ಕುಮಾರ್ ಅಕಾಡೆಮಿಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಯುವ ಪರ ವಕೀಲರು ಆರೋಪ ಮಾಡಿದ್ದರು. ಮಾಧ್ಯಮದೆದುರು ಶ್ರೀದೇವಿ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳಿದ್ದರು. ಆದರೆ ಶ್ರೀದೇವಿ ಇದೆಲ್ಲವೂ ಸುಳ್ಳು ಎಂದಿದ್ದಾರೆ.

ಈ ಬಗ್ಗೆ ಶ್ರೀದೇವಿ ತಂದೆ ಮಾತನಾಡಿದ್ದು, ನಾವು ದೊಡ್ಮನೆ ಅನ್ನೋ ಕಾರಣಕ್ಕೆ ಮದುವೆ ಮಾಡಿಕೊಟ್ಟಿಲ್ಲ. ನನ್ನ ಮಗಳು ವಿದ್ಯಾವಂತೆ, ದುಡಿದು ತಿನ್ನೋ ತಾಕತ್ತಿದೆ ಅಂತ ಮದುವೆ ಮಾಡಿಕೊಟ್ಟಿದ್ದು. ಆತ ಎಸ್​ಎಸ್​ಎಲ್​ಸಿ. ಆದರೂ ಮದುವೆ ಮಾಡಿಕೊಟ್ಟೆ, ಈವರೆಗೂ ನನ್ನ ಮಗಳು ಗಂಡನ ಮನೆಯ ಬಗ್ಗೆ ಒಂದು ಕೆಟ್ಟ ಮಾತು ಆಡಿಲ್ಲ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿಬಂದ ಮಗಳ ಬಗ್ಗೆ ಈ ರೀತಿ ಮಾತನಾಡೋದು ಸರಿಯಲ್ಲ ಆಕೆ ವಿದ್ಯಾವಂತೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!