ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಮಗ ಮೂರನೇ ಬಾರಿ ಸೋತಿದ್ದಾನೆ. ಅವನು ಕೇವಲ ಚುನಾವಣೆಯಲ್ಲಿ ಸೋತಿದ್ದಾನೆ, ಆದರೆ ಮನುಷ್ಯನಾಗಿ ಸೋತಿಲ್ಲ. ನನ್ನ ಮಗ ಮಾನವೀಯತೆ, ಸಹೃದಯತೆ ಸೋತಿಲ್ಲ ಎಂದು ಅನಿತಾ ಕುಮಾರಸ್ವಾಮಿ ನಿಖಿಲ್ ಗೆ ಧೈರ್ಯ ತುಂಬಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಚುನಾವಣಾ ಫಲಿತಾಂಶದ ನಂತರ, ಅವರು ಮೊದಲ ಬಾರಿಗೆ ಎಕ್ಸ್‌ನಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ನನ್ನ ಮಗ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸೋಲನುಭವಿಸಿರುವುದನ್ನು ಒಪ್ಪುತ್ತೇನೆ. ಚುನಾವಣಾ ವ್ಯವಸ್ಥೆಯಲ್ಲಿ ಸೋಲು-ಗೆಲುವು ಇದೆ, ಒಬ್ಬರು ಗೆದ್ದರೆ ಇನ್ನೊಬ್ಬರು ಸೋಲಬೇಕು. ಆದರೆ ವೈಫಲ್ಯಕ್ಕೆ ಹಲವು ಕಾರಣಗಳಿವೆ. ಹಾಗಾಗಿ ನಿಖಿಲ್ ಸೋಲಿಗೆ ಕಾರಣಗಳೇನು ಎಂಬ ಚರ್ಚೆಗೆ ಹೋಗುವುದಿಲ್ಲ.
ನನಗೆ, ನನ್ನ ಪತಿಗೆ ಮತ್ತು ನನ್ನ ಗೌರವಾನ್ವಿತ ಮಾವನಿಗೆ ರಾಜಕೀಯದಲ್ಲಿ ಸೋಲು-ಗೆಲುವು ಹೊಸದೇನಲ್ಲ. ನಾವು ಎರಡೂ ಆಯ್ಕೆಗಳನ್ನು ಸಮಚಿತ್ತದಿಂದ ಸ್ವೀಕರಿಸಿದ್ದೇವೆ. ಗೆದ್ದಾಗ ಬೀಗಿಲ್ಲ, ಸೋತಾಗ ಕುಗ್ಗಿಲ್ಲ. ನನ್ನ ಮಗನಿಗೂ ಇದೇ ಅನ್ವಯ ಆಗುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.