VIDEO | ಶಾಲೆಯನ್ನೇ ಬ್ಯೂಟಿ ಪಾರ್ಲರ್‌ ಮಾಡಿಕೊಂಡ್ರು! ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಮುಖ್ಯೋಪಾಧ್ಯಾಯಿನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಶಾಲಾ ಸಮಯದಲ್ಲಿ ಮಕ್ಕಳಿಗೆ ಪಾಠ ಮಾಡೋದನ್ನು ಬಿಟ್ಟು ಅಡುಗೆ ಕೋಣೆಯಲ್ಲಿ ಬ್ಯೂಟಿ ಪಾರ್ಲರ್‌ ತೆಗೆದುಕೊಂಡು ಕೂತ ಘಟನೆ ಉನ್ನಾವೋದ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಸಂಗೀತಾ ಸಿಂಗ್​ ಎಂಬ ಮುಖ್ಯೋಪಾಧ್ಯಾಯಿನಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಬದಲು ಶಾಲೆಯಲ್ಲಿ ಫೇಶಿಯಲ್​ ಮತ್ತು ಮೇಕಪ್​ ಮಾಡಿಸಿಕೊಂಡು ಸಿಕ್ಕಿಬಿದ್ದಿದ್ದಾರೆ. ಸಹಾಯಕ ಶಿಕ್ಷಕಿ ಆನಮ್‌ ಎಮ್‌ ಎಸ್‌ ಖಾನ್‌ ಎನ್ನುವವರು ರೆಡ್‌ ಹ್ಯಾಂಡ್‌ ಆಗಿ ವಿಡಿಯೋ ಮಾಡಿದ್ದಾರೆ.

ಅಡುಗೆ ಕೋಣೆಯ ಬಾಗಿಲು ತೆಗೆದಿದ್ದಂತೆಯೇ ಫೇಶಿಯಲ್‌ ಮಾಡಿಸಿಕೊಳ್ಳುತ್ತಿದ್ದ ಶಿಕ್ಷಕಿ ಸಂಗೀತಾ ಬೆಚ್ಚಿಬಿದ್ದಿದ್ದಾರೆ. ವಿಡಿಯೋ ಚಿತ್ರೀಕರಿಸೋದು ಗೊತ್ತಾಗುತ್ತಿದ್ದಂತೆಯೇ ಸಂಗೀತಾ ಸಿಟ್ಟಿಗೆದ್ದು ಎಮ್‌ಎಸ್‌ಖಾನ್‌ ಮೇಲೆ ಹಲ್ಲೆ ಮಾಡಿದ್ದಾರೆ. ಕೈಗೆ ಕಚ್ಚಿ ರಕ್ತ ಬಂದಿದ್ದು, ಅದನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಸದ್ಯ ಮುಖ್ಯೋಪಾಧ್ಯಾಯಿನಿ ವಿರುದ್ಧ ಕೇಸ್​ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!