ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಸ್‌ಎಂ ಕೃಷ್ಣಅವರು ನನ್ನನ್ನು ಮಗನ ರೀತಿ ನೋಡುತ್ತಿದ್ದರು. ರಾಜಕಾರಣದಲ್ಲಿ ಬೆಳೆಯಲು ಮಾರ್ಗದರ್ಶನ ನೀಡಿದವರು ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ.
ಬೇರೆಯವರಿಗೂ ನನಗೂ ಬಹಳ ವ್ಯತ್ಯಾಸವಿದೆ. ನಾನು ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ, ಒಡನಾಡಿದ್ದೇನೆ ಎಂದು ಹೇಳಿ ಕಣ್ಣೀರು ಹಾಕಿದರು. ಇಂದು ಬೆಳಗ್ಗೆ 3 ಗಂಟೆಗೆ ಮಗಳು ಕರೆ ಮಾಡಿ ವಿಚಾರ ತಿಳಿಸಿದಳು. ನಮ್ಮ ಕುಟುಂಬಕ್ಕೆ ಇದು ದೊಡ್ಡ ಆಘಾತ. ನಾನು ಅವರ ಕುಟಂಬದ ಒಬ್ಬ ಸದಸ್ಯ. ರಾಜಕಾರಣದಲ್ಲಿ ನಾನು ಬೆಳೆದಿದ್ದು, ಅವರು ನನ್ನನ್ನು ಬೆಳೆಸಿದ್ದು ದೊಡ್ಡ ಇತಿಹಾಸವಿದೆ ಎಂದರು.
ನನ್ನ ರಾಜಕಾರಣದ ಮೊದಲ ಗುರು. ಅವರ ಮತ್ತು ನನ್ನ ಒಡನಾಟದ ಇತಿಹಾಸವನ್ನು ಈಗ ನಾನು ಹೇಳುವುದಿಲ್ಲ. ನಾನು ಏನಾದ್ರೂ ತಪ್ಪು ಮಾಡಿದರೆ ಬಹಳ ನೊಂದು ಮಾತನಾಡುತ್ತಿದ್ದರು ಎಂದು ತಿಳಿಸಿದರು.