ಹೊಸದಿಗಂತ ವರದಿ, ಮುಂಡಗೋಡ :
ಬೊಲೆರೊ ವಾಹನ ಅಡ್ಡ ಬಂದ ಹಿನ್ನೆಲೆಯಲ್ಲಿ ಅಪಘಾತ ತಪ್ಪಿಸಲು ಹೊದ ಶಿರಸಿ ಕಡೆಯಿಂದ ಬಂದ ಬಸ್ ರಸ್ತೆಯ ಪಕ್ಕದಲ್ಲಿರುವ ಮರದ ಟೊಂಗೆಗೆ ಹೊಡೆದು ಚರಂಡಿಗೆ ಹೋಗಿ ಬಸ್ ನಲ್ಲಿರುವ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗೊಂಡ ಘಟನೆ ಕಾತೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಪುರ ಗ್ರಾಮದಲ್ಲಿ ಜರುಗಿದೆ.
ಶಿರಸಿ ಕಡೆಯಿಂದ ಬಸ ಬರುತ್ತಿರುವಾಗ ನಂದಿಪುರ ಗ್ರಾಮದ ಸನಿಹದಲ್ಲಿ ಬೊಲೆರೊ ವಾಹನವೊಂದು ರಸ್ತೆಯಲ್ಲಿ ಅಡ್ಡ ಬಂದಿದೆ. ಅಷ್ಟರಲ್ಲಿ ಬಸ್ ಚಾಲಕ ಅಪಘಾತ ಆಗುವುದನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಮರದ ಟೊಂಗೆಗೆ ಹೊಡೆದು ಚರಂಡಿಗೆ ಬಸ್ ಹೋಗಿದೆ.
ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಗತಿದ್ದಾರೆ.