ಎಚ್ಚರ…. ಇಲ್ಲಿ ಮುಖಕ್ಕೆ ಟವೆಲ್ ಸುತ್ತಿಕೊಂಡು ರಾತ್ರಿ ಓಡಾಡುತ್ತಿದ್ದಾರೆ ಕಳ್ಳರ ಗ್ಯಾಂಗ್

ಹೊಸದಿಗಂತ ವರದಿ, ವಿಜಯಪುರ:

ಮುಖಕ್ಕೆ ಟವೆಲ್ ಸುತ್ತಿಕೊಂಡು ಕಳ್ಳರ ಗ್ಯಾಂಗ್ ವೊಂದು ರಾತ್ರಿ ನಗರದ ಕೆಲ ಬಡಾವಣೆಗಳಲ್ಲಿ ಸಂಚರಿಸಿ, ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.

ಇಲ್ಲಿನ ಕನಕದಾಸ ಬಡಾವಣೆ, ರಾಜಕುಮಾರ್ ಲೇಔಟ್ ಸೇರಿ ಇತರೆ ಬಡಾವಣೆಗಳಲ್ಲಿ, ಆರು ಜನರ ಗ್ಯಾಂಗ್ ಮುಖಕ್ಕೆ ಟವೆಲ್ ಸುತ್ತಿಕೊಂಡು, ಕೈಯಲ್ಲಿ ಕಬ್ಬಿಣದ ರಾಡ್ ಸೇರಿದಂತೆ ವಿವಿಧ ವಸ್ತುಗಳನ್ನು ಹಿಡಿದುಕೊಂಡು ಓಡಾಟ ಮಾಡಿದ್ದಾರೆ. ಈ ವಿಡಿಯೋ ಬಡಾವಣೆಯ ಮನೆಯಲ್ಲಿರುವ ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಕಳ್ಳರ ಗ್ಯಾಂಗ್ ಅನ್ನು ಕೂಡಲೆ ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!