ಚಿಂತೆ ಇಲ್ಲದವನಿಗೆ ರಸ್ತೆಯಲ್ಲಿ ನಿಂತ ನೀರಲ್ಲೂ ನಿದ್ದೆ: ಇದ್ಯಾವುದಪ್ಪ ಗಾದೆ ಅನ್ಕೊಂಡ್ರಾ? ನೀವೇ ಓದಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲವರಿಗೆ ಮಳೆ ಎಂದರೆ ತುಂಬಾ ಇಷ್ಟ. ಮಳೆ ಬಂದರೆ ನಿಂತು ಸಂಭ್ರಮಿಸುವವರು ಎಷ್ಟೋ ಮಂದಿ. ಆದರೆ ಕೆಲವರು ಇನ್ನೂ ಮುಂದೆ ಹೋಗಿ ಈ ಮಳೆಯೊಂದಿಗೆ ಆಟವಾಡುತ್ತಾರೆ. ಯುವಕನೊಬ್ಬ ಬಿಳಿ ಚಾಪೆಯ ಮೇಲೆ ಮಲಗಿ ರಸ್ತೆಯಲ್ಲಿ ತೇಲುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟಿಜನ್‌ಗಳು ಯುವಕನ ಖುಷಿಗೆ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ಈ ವಿಡಿಯೋವನ್ನು ಪುಣೆಯ ಯೆರವಾಡ ​​ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ. ಈ ವೀಡಿಯೋದಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು, ಚಾಲಕರಿಗೆ ವಾಹನ ಚಲಾಯಿಸಲು ತೊಂದರೆಯಾಗಿದೆ. ನೀರು ಹರಿಯುವಾಗ ಯುವಕನೊಬ್ಬ ಬಿಳಿ ಚಾಪೆಯ ಮೇಲೆ ಮಲಗಿ ರಸ್ತೆಯಲ್ಲಿ ತೇಲುತ್ತಿರುವುದನ್ನು ಕಾಣಬಹುದು. ವಿಡಿಯೋ ನೋಡಿದ ಮೇಲೆ ಯುವಕ ಮೋಜು ಮಸ್ತಿ ಮಾಡುತ್ತಿರುವುದು ಸ್ಪಷ್ಟವಾಗಿದೆ. ಚಾಲಕರೆಲ್ಲ ಈ ಯುವಕನತ್ತ ಕಣ್ಣು ಹಾಯಿಸುತ್ತಿದ್ದರೂ, ಈ ಯುವಕ ಮಾತ್ರ ಆನಂದಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಈ ವಿಡಿಯೋವನ್ನು mipunekar.in ಇನ್‌ಸ್ಟಾಗ್ರಾಮ್ ಪುಟದಲ್ಲಿ ಪ್ರಕಟಿಸಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಲೈಕ್, ಕಮೆಂಟ್ಸ್ ಹಾಕಿದ್ದಾರೆ. ಗುರು ನೇರವಾಗಿ ಯರವಾಡ ಜೈಲಿಗೆ ಹೋಗಿ ಎಂದಿದ್ದಾರೆ. ಇನ್ನೊಬ್ಬರು “ನೀವು ನಮ್ಮ ಹೃದಯವನ್ನು ಗೆದ್ದಿದ್ದೀರಿ ಬಾಸ್.” ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ: “ಹೇ ಬ್ರೋ. ನೀವು ಹೀಗೆಯೇ ಹೋದರೆ, ಚರಂಡಿಗೆ ಹೋಗುತ್ತೀರಾ” ಎಂದು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!