ತೆಲಂಗಾಣಕ್ಕೆಹೋಗಿ ವಿದ್ಯುತ್ ಘೋಷಣೆ ಮಾಡ್ತಾರೆ, ಇಲ್ಲಿ ಮಹದೇವಪ್ಪನಿಗೂ ಕತ್ತಲು, ಕಾಕಾ ಪಾಟೀಲ್‌ಗೂ ಕತ್ತಲು: ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣಕ್ಕೆ (Telangana) ಹೋಗಿ 5 ಗಂಟೆ ವಿದ್ಯುತ್ ಘೋಷಣೆ ಮಾಡಿದ್ದಾರೆ. ಆದ್ರೆ ಇಲ್ಲಿ ಮಹದೇವಪ್ಪನಿಗೂ ಕತ್ತಲು, ಕಾಕಾ ಪಾಟೀಲ್‌ಗೂ ಕತ್ತಲು ಎಂದು ಮಾಜಿ ಮುಖ್ಯಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಜೆಪಿ ಭವನದಲ್ಲಿ (JP Bhavan) ತುರ್ತು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಅಲ್ಲಿ ವಿದ್ಯುತ್ ಕೊಡ್ತೀನಿ ಅಂತಿರಾ. ಇಲ್ಲಿ ಶಾಸಕರು ಟಾರ್ಚ್ ಲೈಟಲ್ಲಿ ಸಭೆ ಮಾಡಿದ್ದೂ ಇದೆ. ಸಚಿವ ಡಿ ಸುಧಾಕರ್ (D Sudhakar) ಮೊಬೈಲ್ ಲೈಟ್‌ನಲ್ಲಿ ಕೆಡಿಪಿ ಸಭೆ ಮಾಡಿದ್ದಾರೆ. ಉಚಿತ ಕರೆಂಟ್ ಅಂತ ಒಂದು ಮನೆಗೆ 7 ಲಕ್ಷ ರೂ. ಬಿಲ್ ಕೊಟ್ಟಿದ್ದಾರೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಇನ್ನೂ 10 ಲಕ್ಷ ಕುಟುಂಬಕ್ಕೆ ಒಂದು ರುಪಾಯಿಯನ್ನೂ ಕೊಡಲಿಲ್ಲ. ತೆಲಂಗಾಣದಲ್ಲಿ ರೈತ ಬಂಧು ಸ್ಕೀಮ್‌ನಲ್ಲಿ 10 ಸಾವಿರ ಈಗಲೆ ಕೊಡುತ್ತಿದ್ದಾರೆ. ಅಲ್ಲಿ ಹೋಗಿ 15 ಸಾವಿರ ಘೋಷಣೆ ಮಾಡಿದ್ದಾರೆ. ಅಲ್ಲಿ 15 ಸಾವಿರ ಘೋಷಣೆ ಮಾಡಿ, ಇಲ್ಲಿ ಕೊಟ್ಟ 4 ಸಾವಿರ ಕಿತ್ತುಕೊಂಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಅಲ್ಲಿ ತೆಲಂಗಾಣಕ್ಕೆ ಹೋಗಿ ಸಿಎಂ ಭಾಷಣ ಮಾಡಿದರು. ನರೇಂದ್ರ ಮೋದಿಗೆ ಚಾಲೆಂಜ್ ಮಾಡುತ್ತಾರೆ. ನನ್ನ ಹೆಸರು ಕೇಳಿದರೆ ನರೇಂದ್ರ ಮೋದಿಗೆ (Narendra Modi) ಭಯ ಅಂತೆ. ದೇಶ ದಿವಾಳಿ ಎಬ್ಬಿಸಿದರು ಅಂತಾ ಹೇಳಿದ್ದಾರೆ. ನಾನು ನಿಮಗೆ ಕೇಳುತ್ತೇನೆ. 35 ಸಾವಿರ ಕೋಟಿ ಸಾಲವನ್ನು ಎಸ್‌ಎಂ ಕೃಷ್ಣ ಮಾಡಿದ್ರು. 15,635 ಕೋಟಿ ಧರ್ಮಸಿಂಗ್ ಸಾಲ ಮಾಡಿದ್ರು. 3,545 ಕೋಟಿ ನಾನು ಸಾಲ ಮಾಡಿದ್ದೆ. 25 ಸಾವಿರ ಕೋಟಿ ಯಡಿಯೂರಪ್ಪ ಮಾಡಿದ್ದರು. 9,357 ಕೋಟಿ ಸದಾನಂದಗೌಡರು ಸಾಲ ಮಾಡಿದ್ದರು. 13,464 ಕೋಟಿ ಜಗದೀಶ್ ಶೆಟ್ಟರ್ ಸಾಲ ಮಾಡಿದ್ದಾರೆ ಎಂದು ಹರಿಹಾಯ್ದರು.

ಒಟ್ಟು 12 ವರ್ಷದಲ್ಲಿ 1 ಲಕ್ಷ ಕೋಟಿ ನಾವು ಮಾಡಿದ ಸಾಲ. ನೀವು ಇದ್ದಾಗ 5 ವರ್ಷದಲ್ಲಿ 2 ಲಕ್ಷ 45 ಸಾವಿರ ಕೋಟಿ ಸಾಲ ಮಾಡಿದ್ದೀರಿ. ನಿಮಗೆ ಸಾಲದ ಬಗ್ಗೆ ಮಾತಾಡೋಕೆ ಯಾವ ನೈತಿಕತೆ ಇದೆ? ಸಿದ್ದರಾಮಯ್ಯ (Siddaramaiah) ಬರೋವರೆಗೂ ರಾಜ್ಯದ ಒಟ್ಟು ಸಾಲ 5 ಲಕ್ಷದ 71 ಸಾವಿರ ಕೋಟಿ ಇತ್ತು. ಇವಾಗ 85,818 ಕೋಟಿ ಸಾಲ ಪಡೆಯುವ ಗುರಿ ಇಟ್ಟುಕೊಂಡಿದ್ದಾರೆ. ಪ್ರತಿ ವರ್ಷ ಸಾಲ ಮರು ಪಾವತಿಗೆ 56 ಸಾವಿರ ಕೋಟಿ ಬೇಕು. ಸರ್ಕಾರದಲ್ಲಿ ದುಡ್ಡಿಲ್ಲ, ಎಲ್ಲಾ ಖಾಸಗಿಯವರ ಕೈಯಲ್ಲಿ ದುಡ್ಡಿದೆ. ಎಲ್ಲಾ ಇವರು ಕೊಳ್ಳೆಹೊಡೆದು ಇಟ್ಟಿದ್ದು. ಎಲ್ಲಾ ಮೊನ್ನೆ ದಾಳಿ ಆಯ್ತಲ್ಲ, ಎಲ್ಲೆಲ್ಲಿ ಎಷ್ಟೆಷ್ಟು ಸಿಕ್ಕಿದೆ ಎಂದು ಕಿಡಿಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!