ಹೆಡ್ ಬುಷ್ ಸಿನಿಮಾದ ವಿವಾದ ಅಂತ್ಯ: ಸಂಧಾನದಲ್ಲಿ ವಿವಾದಾತ್ಮಕ ಡೈಲಾಗ್‌ ಕತ್ತರಿಗೆ ಒಪ್ಪಿಗೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹೆಡ್ ಬುಷ್ ಸಿನಿಮಾ ಸಂಧಾನ ಸಫಲವಾಗಿದ್ದು, , ವಿವಾದತ್ಮಕ ಡೈಲಾಗ್‌ ಕತ್ತರಿಗೆ ಚಿತ್ರ ತಂಡ ಒಪ್ಪಿಗೆ ನೀಡಿದೆ. ಇಂದು ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಜುಜುಬಿ ಕರಗ ಪದ ಮ್ಯೂಟ್‌ ಮಾಡಲು ಚಿತ್ರ ತಂಡ ಒಪ್ಪಿಕೊಂಡಿದೆ.
ಸಂಧಾನ ಸಭೆ ಬಳಿಕ ಮಾತನಾಡಿದ ಸಿನಿಮಾದ ನಟ, ನಿರ್ಮಾಪಕ ಧನಂಜಯ್‌ ಮಾತನಾಡಿ, ಯಾರನ್ನು ನೋವು ಮಾಡುವುದು ನಮ್ಮ ಉದ್ದೇಶವಾಗಿಲ್ಲ, ಬೇಸರವಾಗಿರುವ ಪದವನ್ನು ಮ್ಯೂಟ್‌ ಮಾಡುವುದಕ್ಕೆ ಒಪ್ಪಿಗೆ ನೀಡಿದ್ದೇವೆ. ಸಮಸ್ಯೆ ಬಗೆಹರಿಸಲು ಸಹಕರ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದರು.
ನನಗೆ ಪ್ರೀತಿ ತೋರಿಸಿದ, ಕೈಹಿಡಿದ ಕನ್ನಡಿಗರಿಗೆ ಧನ್ಯವಾದಗಳು, ನನ್ನಂತಹವರು ನೂರಾರು ಜನರು ಬರುತ್ತಾರೆ, ಎಲ್ಲರೂ ಕನಸುಗಳನ್ನು ಇಟ್ಟುಕೊಂಡು ಬರುತ್ತಾರೆ, ಅಂತಹವರಿಗೆ ನನ್ನ ಮಾತು ಶಕ್ತಿ ಆಗಲಿ ಅಂತ, ಇದಲ್ಲದೇ ನಾನು ನನ್ನ ತಂಡದಿಂದ ಹೊಸಬರಿಗೆ ಅವಕಾಶ ನೀಡುವೆ ಅಂತ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!