ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಯಾಸಿಯಲ್ಲಿ ಎರಡು ಬಸ್‌ಗಳ ನಡುವೆ ಡಿಕ್ಕಿಯಾಗಿ ಹಲವಾರು ಯಾತ್ರಾರ್ಥಿಗಳು ಗಾಯಗೊಂಡಿದ್ದು. ಬಸ್ ಕತ್ರಾ, ವೈಷ್ಣೋದೇವಿಯಿಂದ ಶಿವಖೋರಿಗೆ ಹೋಗುತ್ತಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿಶೇಷ್ ಪಾಲ್ ಮಹಾಜನ್ ತಿಳಿಸಿದ್ದಾರೆ.
ವಿಶೇಷ್ ಪಾಲ್ ಮಹಾಜನ್ ಮಾತನಾಡಿ, ಬಸ್ ಕತ್ರಾದಿಂದ ಶಿವಖೋರಿಗೆ ಹೋಗುತ್ತಿತ್ತು. ಕೆಲವರಿಗೆ ಗಾಯಗಳಾಗಿದ್ದು, ಎಸ್‌ಎಚ್‌ಒ ವಾಹನ ಮತ್ತು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗಳು ಚಿಕ್ಕದಾಗಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಎಸ್‌ಎಚ್‌ಒಗೆ ಸೂಚಿಸಲಾಗಿದೆ. ಬಸ್‌ನಲ್ಲಿ ಮಕ್ಕಳು ಸೇರಿದಂತೆ 40 ಮಂದಿ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.