January23, 2026
Friday, January 23, 2026
spot_img

HEALTH | ಗ್ರೀನ್‌ ಟೀ ಒಕೆ, ಆದರೆ ಗ್ರೀನ್‌ ಕಾಫಿ ಬಗ್ಗೆ ಕೇಳಿದ್ದೀರಾ? ಇದರಲ್ಲಿ ಏನೆಲ್ಲಾ ಇದೆ ನೋಡಿ

ಸಾಮಾನ್ಯವಾಗಿ ಕಾಫಿ ಎಲ್ಲರೂ ಕುಡಿಯುತ್ತಾರೆ ಆದರೆ ಗ್ರೀನ್‌ ಕಾಫಿ ಬಗ್ಗೆ ಕೇಳಿದ್ದೀರಾ?
ಗ್ರೀನ್ ಕಾಫಿಗಾಗಿ ಕಾಫಿ ಬೀಜಗಳನ್ನು ಕಚ್ಚಾವಾಗಿಯೇ ಕಡಿಮೆ ಉರಿಯಲ್ಲಿ ಹುರಿಯಲಾಗುತ್ತದೆ. ಹಸಿರು ಕಾಫಿ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಕ್ಲೋರೊಜೆನಿಕ್ ಆಮ್ಲವನ್ನು ಹೊಂದಿರುತ್ತವೆ. ಇದು ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ. ಇನ್ನು ಸಾಕಷ್ಟು ಲಾಭಗಳಿವೆ ನೋಡಿ..

ಗ್ರೀನ್ ಕಾಫಿ ಬೀಜಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿರುವ ಕ್ಲೋರೊಜೆನಿಕ್ ಆಮ್ಲವು ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಸೇವಿಸುವುದರಿಂದ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ತೂಕ ಇಳಿಸಿಕೊಳ್ಳಲು ಹಾಗೂ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಗ್ರೀನ್​ ಕಾಫಿ ಜೀರ್ಣಾಂಗ ವ್ಯವಸ್ಥೆಯಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬು ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಕಡಿಮೆ ಕ್ಯಾಲೋರಿಗಳನ್ನು ಹೀರಿಕೊಳ್ಳುವಾಗ ಕಡಿಮೆ ಕೊಬ್ಬು ಸಂಗ್ರಹವಾಗುತ್ತದೆ.

ಗ್ರೀನ್​ ಕಾಫಿಯಲ್ಲಿರುವ ಕ್ಲೋರೋಜೆನಿಕ್ ಆಮ್ಲವು ದಿನಕ್ಕೆ ಒಮ್ಮೆ ಕುಡಿದರೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಪ್ರತಿದಿನ ಇದನ್ನು ಕುಡಿಯುವುದರಿಂದ ಟೈಪ್ 2 ಮಧುಮೇಹದ ತೀವ್ರತೆ ಕಡಿಮೆಯಾಗುತ್ತದೆ.

ಗ್ರೀನ್ ಕಾಫಿಯಲ್ಲಿರುವ ಕ್ಲೋರೋಜೆನಿಕ್ ಆಮ್ಲವು ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿದೆ. ರಕ್ತನಾಳಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರಕ್ತನಾಳಗಳ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ. ಗ್ರೀನ್ ಕಾಫಿ ರಕ್ತದೊತ್ತಡವನ್ನು ಹೆಚ್ಚಿಸುವ ಕಾರ್ಟಿಸೋಲ್‌ನಂತಹ ಒತ್ತಡದ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡುತ್ತದೆ 

Must Read