April 7, 2026
Tuesday, April 7, 2026
spot_img

Health Alert | ಪ್ರೋಟೀನ್ ಪ್ರೋಟೀನ್ ಅನ್ಕೊಂಡು ಹೆಚ್ಚು ಪನೀರ್ ತಿಂತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೀವು ಓದ್ಲೇ ಬೇಕು

ಇತ್ತೀಚೆಗೆ ಆರೋಗ್ಯ, ದೇಹದ ತೂಕ ಇಳಿಕೆ ಮತ್ತು ಸ್ನಾಯು ಬಲ ಹೆಚ್ಚಿಸಿಕೊಳ್ಳುವ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಬಂದಿದೆ. ಇದರಿಂದ ಹಲವರು ಪನೀರ್ ಅನ್ನು ಹೆಚ್ಚು ಪ್ರಮಾಣದಲ್ಲಿ ತಿನ್ನಲು ಆರಂಭಿಸಿದ್ದಾರೆ. ಸಸ್ಯಾಹಾರಿಗಳಿಗೆ ಇದು ಉತ್ತಮ ಪ್ರೋಟೀನ್ ಆಹಾರ ಎನ್ನುವುದು ಸತ್ಯ. ಆದರೆ ಅತಿಯಾಗಿ ಸೇವಿಸಿದರೆ ಕೆಲವು ಸಮಸ್ಯೆಗಳು ಎದುರಾಗಬಹುದು.

ಪನೀರ್‌ನಲ್ಲಿ ದೇಹಕ್ಕೆ ಅಗತ್ಯವಾದ ಪ್ರೋಟೀನ್ ಜೊತೆಗೆ ಕೊಬ್ಬಿನ ಅಂಶವೂ ಸಾಕಷ್ಟು ಇರುತ್ತದೆ. ಆದ್ದರಿಂದ ಇದನ್ನು ಮಿತಿ ಮೀರಿಸಿ ತಿಂದರೆ ತೂಕ ಕಡಿಮೆಯಾಗುವ ಬದಲು ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಪನೀರ್ ಸೇವಿಸುವುದು ಸರಿಯಾದ ಅಭ್ಯಾಸವಲ್ಲ.

ಇದನ್ನೂ ಓದಿ:

ಕೆಲವರಿಗೆ ಹೆಚ್ಚು ಪನೀರ್ ತಿಂದ ಬಳಿಕ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಅಜೀರ್ಣದಂತಹ ಸಮಸ್ಯೆಗಳು ಕಾಣಿಸಬಹುದು. ಹಾಲಿನ ಪದಾರ್ಥಗಳು ಎಲ್ಲರ ದೇಹಕ್ಕೆ ಒಂದೇ ರೀತಿಯಲ್ಲಿ ಹೊಂದುವುದಿಲ್ಲ. ಹೀಗಾಗಿ ದೇಹದ ಸ್ವಭಾವಕ್ಕೆ ತಕ್ಕಂತೆ ಪ್ರಮಾಣವನ್ನು ನಿಗದಿಪಡಿಸಬೇಕು.

ದೇಹಕ್ಕೆ ಬೇಕಾದ ಪ್ರೋಟೀನ್ ಪನೀರ್‌ನಿಂದ ಮಾತ್ರ ಪಡೆಯಬೇಕೆಂದಿಲ್ಲ. ಬೇಳೆ, ಮೊಟ್ಟೆ, ಮೊಸರು, ಸೋಯಾ, ಮೊಳಕೆ ಕಾಳುಗಳು ಮುಂತಾದವುಗಳನ್ನೂ ಆಹಾರದಲ್ಲಿ ಸೇರಿಸಬಹುದು. ಹೀಗೆ ಮಾಡಿದರೆ ದೇಹಕ್ಕೆ ಸಮತೋಲನ ಪೋಷಕಾಂಶಗಳು ಸಿಗುತ್ತವೆ.

ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ರಾತ್ರಿ ಊಟದಲ್ಲಿ 100 ರಿಂದ 150 ಗ್ರಾಂ ಪನೀರ್ ಒಬ್ಬ ಸಾಮಾನ್ಯ ಮನುಷ್ಯನಿಗೆ ಸಾಕು. ಅತಿಯಾಗಿ ತಿನ್ನುವುದಕ್ಕಿಂತ ಸರಿಯಾದ ಪ್ರಮಾಣದಲ್ಲಿ ಸೇವಿಸುವುದೇ ಆರೋಗ್ಯಕರ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !