HEALTH| ಜಗಿದು, ಉಗಿಯುವ ಮುನ್ನ ಯೋಚಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹುಟ್ಟಿನಿಂದ ಸಾವಿನ ತನಕವೂ, ಶುಭಾಶುಭ ಕಾರ್ಯಗಳಲ್ಲೂ ವೀಳ್ಯದೆಲೆಗೆ ಪ್ರಾಧಾನ್ಯತೆಯಿದೆ. ಸನಾತನ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿ ವೀಳ್ಯದೆಲೆಯಿದೆ. ಇದು ಕೃಷಿ ಸಂಸ್ಕೃತಿ, ಜಾನಪದ ಸಂಸ್ಕೃತಿ, ಧಾರ್ಮಿಕ ಸಂಸ್ಕೃತಿ, ಆರೋಗ್ಯ ಸಂಸ್ಕೃತಿಯಲ್ಲೂ ಪಾಲು ಪಡೆದುಕೊಂಡಿದೆ. ಹಿರಿಯರು ಎಲೆಯಡಿಕೆ ಹಾಕುವ ಸಂಪ್ರದಾಯವನ್ನಿಟ್ಟುಕೊಂಡಿದ್ದಾರೆ. ಹಲವು ಮನೆಗಳಲ್ಲಿ ಇಂದಿಗೂ ಹಿರಿಯರು ಬಳಸುತ್ತಿದ್ದ ʻಎಲೆ ಪೆಟ್ಟಿಗೆʼ ಎಂಬ ವಸ್ತು ಕಾಣಸಿಗುತ್ತವೆ. ಮಲೆನಾಡು, ಉತ್ತರ ಕನ್ನಡದಲ್ಲಿ ಹಾಗೂ ಇತ್ತ ಕಾಸರಗೋಡು ಕಡೆಗಳಲ್ಲಿ ಪ್ರತಿಯೊಂದು ಕಾರ್ಯಕ್ರಮದಲ್ಲೂ ವೀಳ್ಯದೆಲೆ ಅಡಿಕೆ ಬಳಕೆಯಿದೆ. ಹವ್ಯಾಸವಾಗಿಯೂ ಎಲೆ ಅಡಿಕೆ ಜಗಿಯುವವರು ಇದ್ದಾರೆ. ಇನ್ನುಕೆಲವರು ಗೀಳಾಗಿಯೂ ಇದನ್ನು ಬಳಸುತ್ತಾರೆ.

ವೀಳ್ಯದೆಲೆಯಲ್ಲಿ ವಿಟಮಿನ್ ಸಿ, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್, ಕ್ಯಾಲ್ಸಿಯಂ ಮತ್ತು ಕ್ಯಾರೋಟಿನ್ ಸಮೃದ್ಧವಾಗಿದೆ. ವೀಳ್ಯದೆಲೆಗೆ ಅದರದ್ದೇ ಆದಂತಹ ಹಸಿಪರಿವಳವಿದೆ.ಈ ಎಲೆಗಳು ಮಧುಮೇಹ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ಜೀರ್ಣಕ್ರಿಯೆ ಚುರುಕಾಗಲು ವೀಳ್ಯದೆಲೆ ಸಹಕಾರಿ. ದೇಹದಲ್ಲಿರುವ ಹೆಚ್ಚುವರಿ ತೂಕ ಕಡಿಮೆಮಾಡಲು ಇದು ಸಹಾಯಮಾಡುತ್ತದೆ.

ಅನೇಕ ಮಂದಿಗೆ ಬಾಯಿಯಲ್ಲಿ ಕೆಟ್ಟ ವಾಸನೆಯಿರುತ್ತದೆ. ಅಂತಹವರು ಹತ್ತು ವೀಳ್ಯದೆಲೆಯನ್ನು ನೀರಿನೊಂದಿಗೆ ಕುದಿಸಿ, ಜೇನು ಬೆರೆಸಿ ಕುಡಿಯಿರಿ. ಇದರಿಂದ ಬಾಯಿಯ ಆರೋಗ್ಯ ಹೆಚ್ಚುವುದಲ್ಲದೆ, ವಾಸನೆ ದೂರವಾಗುತ್ತದೆ. ಹಲ್ಲು ಮತ್ತು ವಸಡು ನೋವು ಇದ್ದವರು ವೀಳ್ಯದೆಲೆ ಜಗಿಯುವುದರಿಂದ ನೋವು ಕಡಿಮೆಮಾಡಿಕೊಳ್ಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!