January22, 2026
Thursday, January 22, 2026
spot_img

HEALTH | ಬೆಳಗ್ಗೆ ಎದ್ದಾಗ ನಿಮಗೆ ಶೀತ ಆಗುತ್ತಾ? ಯಾಕೆ? ಇದನ್ನ ತಡೆಯೋದು ಹೇಗೆ?

ಬೆಳಗ್ಗೆ ಎದ್ದ ಕೂಡಲೇ ಒಂದು ಸೀನು ಬಂದ್ರೆ ಸಾಕು! ಮೂಗು ತುರಿಸೋಕೆ ಶುರುವಾಗಿ, ಶೀತ ಆಗಿಬಿಡುತ್ತೆ. “ರಾತ್ರಿ ಚೆನ್ನಾಗಿದ್ದೇ, ಬೆಳಗ್ಗೆ ಯಾಕೆ ಶೀತ?” ಅನ್ನೋ ಪ್ರಶ್ನೆ ಬಹಳ ಜನರಿಗೆ ಬರುತ್ತದೆ. ಇದಕ್ಕೆ ಹವಾಮಾನ, ನಮ್ಮ ದೇಹದ ಪ್ರತಿಕ್ರಿಯೆ ಮತ್ತು ದಿನಚರಿಯ ಕೆಲವು ಚಿಕ್ಕ ತಪ್ಪುಗಳೇ ಕಾರಣವಾಗಿರುತ್ತವೆ. ಸರಳ ಗಮನವಿಟ್ಟರೆ ಈ ಬೆಳಗಿನ ಶೀತವನ್ನು ಸುಲಭವಾಗಿ ನಿಯಂತ್ರಿಸಬಹುದು.

  • ತಾಪಮಾನ ಬದಲಾವಣೆಯ ಪರಿಣಾಮ: ರಾತ್ರಿ ದೇಹದ ಉಷ್ಣತೆ ಸ್ವಲ್ಪ ಇಳಿಯುತ್ತದೆ. ಬೆಳಗ್ಗೆ ತಂಪು ಗಾಳಿಗೆ ಎಕ್ಸ್ಪೋಸ್ ಆದಾಗ ಮೂಗಿನ ಒಳಭಾಗದ ನಾಳಗಳು ತಕ್ಷಣ ಪ್ರತಿಕ್ರಿಯಿಸಿ ಶೀತದ ಲಕ್ಷಣಗಳು ಕಾಣಿಸುತ್ತವೆ. ಫ್ಯಾನ್ ಅಥವಾ ಎಸಿಯಲ್ಲಿ ನಿದ್ರೆ ಮಾಡುವವರಿಗೆ ಇದು ಹೆಚ್ಚಾಗಿ ಕಾಣಿಸುತ್ತದೆ.
  • ಅಲರ್ಜಿಯ ಪಾತ್ರ: ಮಲಗುವ ಕೊಠಡಿಯಲ್ಲಿ ಧೂಳು, ಹಾಸಿಗೆ ಕವರ್‌ಗಳಲ್ಲಿ ಧೂಳು ಇದ್ದರೆ ಬೆಳಿಗ್ಗೆ ಶೀತ, ಸೀನುವಿಕೆ ಹೆಚ್ಚಾಗುತ್ತದೆ. ಇದು ಜ್ವರದ ಶೀತವಲ್ಲ, ಅಲರ್ಜಿ ಶೀತ.
  • ರೋಗನಿರೋಧಕ ಶಕ್ತಿ ಕಡಿಮೆ ಇದ್ದಾಗ: ಬಾಡಿ ಡಿಫೆನ್ಸ್ ದುರ್ಬಲವಾದರೆ ದೇಹವು ಸಣ್ಣ ವೈರಸ್‌ಗಳನ್ನೂ ಸುಲಭವಾಗಿ ಒಳಗೊಳ್ಳುತ್ತದೆ. ಇದರ ಪರಿಣಾಮ ಬೆಳಗ್ಗೆ ಶೀತವಾಗಿ ಕಾಣಿಸಬಹುದು.
  • ತಡೆಯುವ ಸರಳ ಕ್ರಮಗಳು: ರಾತ್ರಿ ಫ್ಯಾನ್ ನೇರವಾಗಿ ಮುಖಕ್ಕೆ ಬೀಸುವಂತೆ ಇಡಬೇಡಿ. ಹಾಸಿಗೆ ಕವರ್, ಬೆಡ್ ಶೀಟ್ ಗಳನ್ನು ವಾರಕ್ಕೊಮ್ಮೆ ತೊಳೆಯಿರಿ. ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರು ಕುಡಿಯುವ ಅಭ್ಯಾಸ ಮಾಡಿ.
  • ಆಹಾರ ಮತ್ತು ಜೀವನಶೈಲಿ ಮಹತ್ವ: ಶುಂಠಿ, ಮೆಣಸು, ತುಳಸಿ ಇರುವ ಪಾನೀಯಗಳು ಶೀತ ತಗ್ಗಿಸಲು ಸಹಾಯ ಮಾಡುತ್ತವೆ. ಸಾಕಷ್ಟು ನಿದ್ರೆ ಮತ್ತು ನೀರಿನ ಸೇವನೆಯೂ ಅತ್ಯಂತ ಮುಖ್ಯ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

Must Read