ಬೇಸಿಗೆಯಲ್ಲಿ ಮೂಗಿನಿಂದ ರಕ್ತ ಬರುವುದು ಸಾಮಾನ್ಯ ಸಮಸ್ಯೆಯಾಗಿದೆ. ಬಿಸಿ ಹವಾಮಾನವು ಮೂಗು ಒಣಗಲು ಮತ್ತು ಮೂಗಿನಿಂದ ರಕ್ತಸ್ರಾವಾಗಲು ಕಾರಣವಾಗುತ್ತದೆ. ಈ ಸಮಸ್ಯೆಗಳಿಗೆ ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ವಿಶೇಷವಾಗಿ ಕೆಲವು ಸಂದರ್ಭಗಳಲ್ಲಿ, ಸಮಸ್ಯೆ ತೀವ್ರವಾಗಿದ್ದರೆ, ನೀವು ತಜ್ಞರ ಸಲಹೆಯನ್ನು ತೆಗೆದುಕೊಳ್ಳಬಹುದು.
ಮೂಗನ್ನು ಒತ್ತುವುದು: ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ, ಅದನ್ನು ನಿಲ್ಲಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ಕೈಯಿಂದ ಮೂಗನ್ನು ಒತ್ತುವುದು. ಏಕೆಂದರೆ ಅದು ರಕ್ತಸ್ರಾವಾದ ಸ್ಥಳದ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಇದು ರಕ್ತವು ತಕ್ಷಣ ನಿಲ್ಲಲು ಕಾರಣವಾಗುತ್ತದೆ.
ವಿಟಮಿನ್ ಇ ಕ್ಯಾಪ್ಸೂಲ್: ಮೂಗಿನ ಹೊಳ್ಳೆಗಳ ಶುಷ್ಕತೆಯಿಂದಾಗಿ ಮೂಗಿನಿಂದ ರಕ್ತಸ್ರಾವವಾಗುವುದು ಅತ್ಯಂತ ಸಾಮಾನ್ಯ ಕಾರಣವಾಗಿದೆ. ಹೀಗಾಗಿ ಒಂದು ವಿಟಮಿನ್ ಇ ಕ್ಯಾಪ್ಸೂಲ್ ನಿಂದ ಎಣ್ಣೆಯನ್ನು ಹೊರತೆಗೆದು ಮೂಗಿನ ಹೊಳ್ಳೆಗಳ ಮೇಲೆ ಹಾಕಿ ಸ್ವಲ್ಪ ಸಮಯ ಇರಿಸಿ. ಇದು ಮೂಗಿನ ಶುಷ್ಕ ಭಾಗವನ್ನು ನಿವಾರಿಸುತ್ತದೆ.
ಐಸ್ ತುಂಡಿನಿಂದ ಮಸಾಜ್ : ಮೂಗಿನಿಂದ ರಕ್ತಸ್ರಾವವನ್ನು ನಿಲ್ಲಿಸಲು ನಿಮ್ಮ ಮೂಗನ್ನು ಐಸ್ ತುಂಡಿನಿಂದ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ಇದು ಮೂಗಿನಲ್ಲಿನ ಸಣ್ಣ ರಕ್ತನಾಳಗಳು ಸಂಕುಚಿತಗೊಳ್ಳುವುದನ್ನು ತಡೆಯುತ್ತದೆ.
ಆಪಲ್ ಸೈಡರ್ ವಿನೆಗರ್: ಹತ್ತಿ ಉಂಡೆಯನ್ನು ವಿನೆಗರ್ನಲ್ಲಿ ಅದ್ದಿ, ಅದನ್ನು ಮೂಗಿನಲ್ಲಿ ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಇರಿಸಿ. ಆಪಲ್ ಸೈಡರ್ ವಿನೆಗರ್ನಲ್ಲಿರುವ ಆಮ್ಲವು ರಕ್ತನಾಳಗಳನ್ನು ಕಿರಿದಾಗಿಸಲು ಸಹಾಯ ಮಾಡುತ್ತದೆ. ಇದು ರಕ್ತಸ್ರಾವವನ್ನು ನಿಲ್ಲಿಸುತ್ತದೆ.