HEALTH DRINK | ಬುದ್ದಿಗೂ ಆರೋಗ್ಯಕ್ಕೂ ಒಳ್ಳೆಯದು ಬಾದಾಮಿ- ಖರ್ಜೂರ ಹಾಲು, ಇಲ್ಲಿದೆ ರೆಸಿಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್ಲರಿಗೂ ಆರೋಗ್ಯವೇ ಭಾಗ್ಯ, ಉತ್ತಮ ಪೌಷ್ಟಿಕ ಆಹಾರ ನಮ್ಮ ದಿನನಿತ್ಯದ ಜೀವನದಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತದೆ. ಆದ್ದರಿಂದ ಎಲ್ಲರಿಗೂ ಒಳ್ಳೆಯ ಆಹಾರ ಬಹಳ ಮುಖ್ಯ.. ಹಾಗಾದರೆ ನಾವು ಸೇವಿಸುವ ಹಾಲಿನ ಜೊತೆ ಇನ್ನಷ್ಟು ವಿಶೇಷವಾಗಿ ಅಧಿಕ ಪೌಷ್ಟಿಕ ಅಂಶಗಳನ್ನು ಒಳಗೊಂಡಿರುವ ಬಾದಾಮಿ-ಖರ್ಜೂರದ ಹಾಲನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ..

The Amazing Benefits of Dates with Milk: Khajoor Milkshake and More!

ಬೇಕಾಗುವ ಪದಾರ್ಥಗಳು:

ಹಾಲು – 3 ಕಪ್
ಖರ್ಜೂರ – 10
ಸಕ್ಕರೆ ಅಥವಾ ಬೆಲ್ಲ- ರುಚಿಗೆ ತಕ್ಕಷ್ಟು
ಬಾದಾಮಿ – 12
ಏಲಕ್ಕಿ ಪುಡಿ – 1/4 ಚಮಚ
ಕೇಸರಿ ದಳ– ಸ್ವಲ್ಪ (ಹಾಲಿನಲ್ಲಿ ನೆನೆಸಿಟ್ಟುಕೊಳ್ಳಿ)

Dates With Milk( Easy Recipe and New Tips!)

ಇದನ್ನು ಮಾಡುವ ವಿಧಾನ:

12 ಬಾದಾಮಿಯನ್ನು ರಾತ್ರಿ ಅಥವಾ 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಅದರ ಸಿಪ್ಪೆ ಸುಲಿದು ಇಟ್ಟುಕೊಳ್ಳಿ.
ಪಾತ್ರೆಯಲ್ಲಿ ಹಾಲನ್ನು 5 ನಿಮಿಷಗಳ ಕಾಲ ಕುದಿಸಿಕೊಳ್ಳಿ.
ಬಾದಾಮಿ ಹಾಗೂ ಖರ್ಜೂರವನ್ನು 5 ಚಮಚ ಹಾಲಿನೊಂದಿಗೆ ಮಿಕ್ಸಿ ಜಾರ್‌ನಲ್ಲಿ ಹಾಕಿ, ಚೆನ್ನಾಗಿ ರುಬ್ಬಿಕೊಳ್ಳಿ.
ತಯಾರಾದ ಪೇಸ್ಟ್ ಅನ್ನು ಕುದಿಯುತ್ತಿರುವ ಹಾಲಿಗೆ ಹಾಕಿ 3-4 ನಿಮಿಷ ಕುದಿಯಲು ಬಿಡಿ. ಅದಕ್ಕೆ ನಂತರ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ. ಬಳಿಕ ಏಲಕ್ಕಿ ಪುಡಿ ಸೇರಿಸಿ, ಸ್ಟೌ ಆಫ್ ಮಾಡಿ.
ಕೊನೆಯಲ್ಲಿ ಹಾಲಿನಲ್ಲಿ ನೆನೆಸಿದ ಕೇಸರಿ ದಳವನ್ನು ಬೆರೆಸಿ, ಬಾದಾಮಿಯಿಂದ ಅಲಂಕರಿಸಿದರೆ, ರುಚಿಕರ ಹಾಗೂ ಆರೋಗ್ಯಕರ ಬಾದಾಮಿ-ಖರ್ಜೂರದ ಹಾಲು ಕುಡಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!