October 7, 2026
Wednesday, October 7, 2026
spot_img

30 ಸಾವಿರ ಅಡಿ ಎತ್ತರದಲ್ಲಿ ಹೆಲ್ತ್ ಎಮರ್ಜನ್ಸಿ: ಅಷ್ಟಕ್ಕೂ ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ನಡೆದಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನದಲ್ಲಿ ಹಾರಾಟದ ವೇಳೆ ಮೂವರು ಪೈಲಟ್‌ಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಉಪಾಹಾರದ ಬಳಿಕ ಫುಡ್ ಪಾಯಿಸನಿಂಗ್ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ವಿಮಾನಯಾನ ಸಂಸ್ಥೆ ಈ ಬಗ್ಗೆ ತನಿಖೆ ಆರಂಭಿಸಿದೆ.

ಒಬ್ಬ ಪೈಲಟ್‌ಗೆ ತೀವ್ರ ಅಸ್ವಸ್ಥತೆ

ಸುಮಾರು 30 ಸಾವಿರ ಅಡಿ ಎತ್ತರದಲ್ಲಿ ವಿಮಾನ ಸಂಚರಿಸುತ್ತಿದ್ದಾಗ ಮೂವರು ಪೈಲಟ್‌ಗಳಿಗೂ ಅಸ್ವಸ್ಥತೆ ಕಾಣಿಸಿಕೊಂಡಿತು. ಅವರಲ್ಲಿ ಒಬ್ಬರ ಆರೋಗ್ಯ ಗಂಭೀರವಾಗಿದ್ದರಿಂದ ವಿಮಾನದಲ್ಲೇ ಆಕ್ಸಿಜನ್‌ ನೀಡಲಾಯಿತು.

ಇದನ್ನೂ ಓದಿ:

ವಿಮಾನ ಸುರಕ್ಷಿತವಾಗಿ ಲಂಡನ್ ತಲುಪಿತು

ಸವಾಲಿನ ಪರಿಸ್ಥಿತಿಯಲ್ಲೂ ಉಳಿದ ಪೈಲಟ್‌ಗಳು ವಿಮಾನವನ್ನು ಸುರಕ್ಷಿತವಾಗಿ ಲಂಡನ್‌ನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಇಳಿಸಿದರು. ಗಂಭೀರವಾಗಿ ಅಸ್ವಸ್ಥಗೊಂಡ ಪೈಲಟ್‌ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ಆಂತರಿಕ ತನಿಖೆಗೆ ಚಾಲನೆ

ಘಟನೆಯ ಬಳಿಕ ಬ್ರಿಟಿಷ್ ಏರ್‌ವೇಸ್ ಸಿಬ್ಬಂದಿ ತಂಗಿದ್ದ ಹೋಟೆಲ್‌, ಅವರು ಸೇವಿಸಿದ ಆಹಾರ ಹಾಗೂ ಕುಡಿಯುವ ನೀರಿನ ಬಗ್ಗೆ ತನಿಖೆ ಆರಂಭಿಸಿದೆ. ಪ್ರಯಾಣಿಕರ ಸುರಕ್ಷತೆಗೆ ಯಾವುದೇ ತೊಂದರೆ ಆಗಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದ್ದು, ಸಿಬ್ಬಂದಿಯ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದೆ.

Must Read