HEALTH | ಗರ್ಭಾವಸ್ಥೆಯಲ್ಲಿ ಕಾಡುವ ಸಿಯಾಟಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಸಿಯಾಟಿಕ್ ಎಂದರೆ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಸೊಂಟ ಮತ್ತು ಪಾದದ ಕೆಳಗೆ ಉಂಟಾಗುವ ನೋವು. ನಿಮ್ಮ ಸಿಯಾಟಿಕ್ ನರಗಳು ಸಂಕೋಚಿತಗೊಂಡಾಗ ಈ ಸಮಸ್ಯೆ ಸಂಭವಿಸುತ್ತದೆ.

ಈ ನರವು ಗರ್ಭಾಶಯದ ಕೆಳಗೆ ಚಲಿಸುತ್ತದೆ ಮತ್ತು ಭ್ರೂಣವು ಅದರ ವಿರುದ್ಧ ತಳ್ಳಿದಾಗ ಈ ನರವು ಸಂಕುಚಿತಗೊಂಡು ನೋವು ಉಂಟಾಗುತ್ತದೆ. ಇದರಿಂದ ನಡೆಯಲು, ಕುಳಿತುಕೊಳ್ಳಲು, ಮಲಗಲು ಸಮಸ್ಯೆಯಾಗುತ್ತದೆ.ಹಾಗಾಗಿ ಈ ನೋವನ್ನು ನಿವಾರಿಸಲು ನೈಸರ್ಗಿಕವಾದ ಈ ಪರಿಹಾರವನ್ನು ಮಾಡಿ.

ಪರಿಹಾರ:

*ಪ್ರಸವ ಪೂರ್ವ ಯೋಗಗಳನ್ನು ಅಭ್ಯಾಸ ಮಾಡಿ. ಇದರಿಂದ ಈ ನೋವಿನಿಂದ ಮುಕ್ತಿ ಪಡೆಯಬಹುದು. ವೈದ್ಯರನ್ನು ಸಂಪರ್ಕಿಸಿ ಈ ಬಗ್ಗೆ ಸಲಹೆ ಪಡೆಯಿರಿ.

* ಖನಿಜ, ಮೆಗ್ನೀಶಿಯಂ, ಪೋಷಕಾಂಶಗಳಿರುವ ಆಹಾರವನ್ನು ಸೇವಿಸಿ. ಇದು ನರಗಳ ಕಾರ್ಯವನ್ನು ಸರಿಪಡಿಸಿ ಉರಿಯೂತದ ಪ್ರಕ್ರಿಯೆಯನ್ನು ಕಡಿಮೆ ಮಾಡುತ್ತದೆ.

* ನಿಯಮಿತವಾಗಿ ವ್ಯಾಯಾಮ, ದೈಹಿಕ ಚಟುವಟಿಕೆಗಳನ್ನು ಮಾಡುತ್ತಿರಿ. ಇದರಿಂದ ರಕ್ತದ ಹರಿವು ಹೆಚ್ಚಾಗಿ ನಿಮ್ಮ ಕೀಲುಗಳು, ಸ್ನಾಯುಗಳ ನೋವು ದೂರವಾಗುತ್ತದೆ.

*ನಿಯಮಿತವಾಗಿ ಪ್ರಸವಪೂರ್ವ ಮಸಾಜ್ ಗಳನ್ನು ಮಾಡುತ್ತಿರಿ. ಇದು ನೋವನ್ನು ತೊಡೆದುಹಾಕಲು ಸಹಕಾರಿಯಾಗಿದೆ. ಇದು ಸಿಯಾಟಿಕ್ ನರಗಳ ಸಂಕೋಚನವನ್ನು ತಪ್ಪಿಸುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!