HEALTH | ದೇಹದಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಅಲರ್ಟ್ ಆಗಿರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನವು ತುಂಬಾ ಸಾಮಾನ್ಯವಾಗಿದೆ. ಇದು ಹಲವು ರೋಗಗಳಿಗೂ ಕಾರಣವಾಗಿದೆ. ಹಾರ್ಮೋನುಗಳ ಅಸಮತೋಲನವು ಆಯಾಸ, ಕೂದಲು ಉದುರುವಿಕೆ, ಮುಟ್ಟಿನಲ್ಲಿ ಏರುಪೇರು, PCOD ಮತ್ತು PCOS ಇತ್ಯಾದಿ ಸಮಸ್ಯೆಗಳಾಗುತ್ತವೆ. ದೇಹವು ಸರಿಯಾಗಿ ಕಾರ್ಯನಿರ್ವಹಿಸಲು, ಹಾರ್ಮೋನುಗಳು ಸಮತೋಲನದಲ್ಲಿರಬೇಕು. ಮಹಿಳೆಯ ದೇಹದಲ್ಲಿ ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ದೇಹದಲ್ಲಿ ಶಕ್ತಿಯ ಕೊರತೆ, ತೂಕದ ಏರಿಳಿತಗಳು, ಮನಸ್ಥಿತಿ ಬದಲಾವಣೆಗಳು, ನಿದ್ರೆಯ ಕೊರತೆ, ನಿದ್ರಾಹೀನತೆ – ಈ ಎಲ್ಲಾ ಸಮಸ್ಯೆಗಳು ನಿಸ್ಸಂದೇಹವಾಗಿ ಹಾರ್ಮೋನ್ ಅಸಮತೋಲನದ ಮೊದಲ ಲಕ್ಷಣಗಳಾಗಿವೆ.

ಹಾರ್ಮೋನ್ ಅಸಮತೋಲನದ ಆರಂಭಿಕ ಲಕ್ಷಣಗಳು:

ಮುಟ್ಟಿನ ಮಾದರಿ
ಅನಿಯಮಿತ ಋತುಚಕ್ರ, ವಿಪರೀತ ರಕ್ತಸ್ರಾವ ಮತ್ತು ತೀವ್ರವಾದ ಶ್ರೀ ಮೆನ್‌ಸ್ಟ್ರುವಲ್ ಸಿಂಡೋಮ್ ಹಾರ್ಮೋನ್ ಅಸಮತೋಲನದ ಆರಂಭಿಕ ಲಕ್ಷಣಗಳಾಗಿವೆ.

ಮನಸ್ಥಿತಿಯಲ್ಲಿ ಏರುಪೇರು
ಯುವ ಪೀಳಿಗೆಯಲ್ಲಿ ಮನಸ್ಥಿತಿ ಬದಲಾವಣೆ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಇದು ಮಿತಿಮೀರಿದರೆ ಸಮಸ್ಯೆಯಾಗಿ ಬದಲಾಗಬಹುದು. ಅತಿಯಾದ ಕೋಪ, ಸಿಡುಕು, ಆತಂಕ ಇವೆಲ್ಲವೂ ಹಾರ್ಮೋನ್ ಅಸಮತೋಲನದ ಕಾರಣದಿಂದ ಬರಬಹುದು.

ಚರ್ಮದ ಸಮಸ್ಯೆಗಳು
ಮುಖದ ಮೇಲೆ ಅತಿಯಾದ ಮೊಡವೆಗಳು ಕಾಣಿಸಿಕೊಳ್ಳಲಾರಂಭಿಸಿದರೆ ಅದು ಕೂಡ ಹಾರ್ಮೋನ್ ಅಸಮತೋಲನದ ಸಂಕೇತವಾಗಿರಬಹುದು. ಚರ್ಮದ ಬಣ್ಣ ಮತ್ತು ವಿನ್ಯಾಸದಲ್ಲಿ ಬದಲಾವಣೆ ಕೂಡ ಇದರ ಲಕ್ಷಣಗಳಾಗಿವೆ.

ಆಯಾಸ
ಪದೇ ಪದೇ ಆಯಾಸ ಮತ್ತು ವಿಚಿತ್ರ ಭಾವನೆಯನ್ನು ಅನುಭವಿಸುತ್ತಿದ್ದರೆ ಹಾರ್ಮೋನ್ ಅಸಮತೋಲನಕ್ಕೆ ಒಳಗಾಗುತ್ತಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಿ. ಇವು ಥೈರಾಯ್ಡ್ನ ಲಕ್ಷಣಗಳೂ ಆಗಿರಬಹುದು.

ತೂಕ ಹೆಚ್ಚಳ ಮತ್ತು ನಷ್ಟ
ಜಿಮ್, ವ್ಯಾಯಾಮ ಮತ್ತು ಯೋಗ ಹೀಗೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ತೂಕ ಇಳಿಸಲು ಸಾಧ್ಯವಾಗದೇ ಇದ್ದರೆ ಹಾರ್ಮೋನ್ ಅಸಮತೋಲನ ಉಂಟಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಹಾರ್ಮೋನ್ ಅಸಮತೋಲನದಿಂದ ತೂಕ ನಷ್ಟವೂ ಆಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!