Saturday, October 11, 2025

Health | ಬೆಳಗ್ಗೆ ಏಳುವಾಗ ನಿಮ್ಮಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಈವಾಗಲೇ ಎಚ್ಚೆತ್ತುಕೊಳ್ಳಿ!

ಮಧುಮೇಹವು ಈಗ ಕೇವಲ ವಯಸ್ಸಾದವರ ಕಾಯಿಲೆ ಅಲ್ಲ, ಯುವಕರು ಸಹ ಇದರಿಂದ ಬಳಲುತ್ತಿದ್ದಾರೆ. ಆದರೆ ಆರಂಭಿಕ ಹಂತದಲ್ಲಿ ಇದನ್ನು ಗುರುತಿಸಿದರೆ, ಮಧುಮೇಹವನ್ನು ತಡೆಯುವುದು ಸಾಧ್ಯ. ಈ ಆರಂಭಿಕ ಹಂತದ ಮಧುಮೇಹವನ್ನು ಪ್ರಿಡಿಯಾಬಿಟಿಸ್ ಎಂದು ಕರೆಯುತ್ತಾರೆ. ಪ್ರಿಡಿಯಾಬಿಟಿಸ್‌ನಲ್ಲಿ ದೇಹದ ಜೀವಕೋಶಗಳು ಇನ್ಸುಲಿನ್ ಅನ್ನು ಸಮರ್ಪಕವಾಗಿ ಬಳಸಲು ಸಾಧ್ಯವಾಗದೇ, ಗ್ಲೂಕೋಸ್ ಶಕ್ತಿಯಾಗಿ ಪರಿವರ್ತನೆ ಮಾಡಲಾಗುವುದಿಲ್ಲ. ಇದರಿಂದ ದೇಹದಲ್ಲಿ ಶಕ್ತಿ ಕೊರತೆ ಉಂಟಾಗಿ ದಿನದ ಆರಂಭದಲ್ಲಿ ಆಯಾಸದ ಅನುಭವವಾಗುತ್ತದೆ.

  • ಬೆಳಿಗ್ಗೆ ಎದ್ದ ನಂತರ ದಣಿದ ಭಾವನೆ: ದೇಹವು ಗ್ಲೂಕೋಸ್ ಅನ್ನು ಸರಿಯಾಗಿ ಬಳಸಲಾಗದ ಕಾರಣ, ದಿನದ ಆರಂಭದಲ್ಲಿ ಆಯಾಸ ಮತ್ತು ಶಕ್ತಿ ಕೊರತೆ ಉಂಟಾಗುತ್ತದೆ.
  • ಅಗಾಗ್ಗೆ ಮತ್ತು ಅತಿಯಾದ ಮೂತ್ರ ವಿಸರ್ಜನೆ: ರಕ್ತದಲ್ಲಿ ಹೆಚ್ಚು ಸಕ್ಕರೆ ಇದ್ದಾಗ ಮೂತ್ರಪಿಂಡಗಳು ಹೆಚ್ಚುವರಿ ಸಕ್ಕರೆಯನ್ನು ಹೊರಹಾಕಲು ಶ್ರಮಿಸುತ್ತವೆ, ಇದರಿಂದ ಮೂತ್ರದ ಪ್ರಮಾಣ ಹೆಚ್ಚಾಗುತ್ತದೆ.
  • ದೃಷ್ಟಿ ಮಂಜಾಗುವುದು: ಅಧಿಕ ರಕ್ತದ ಸಕ್ಕರೆ ಕಣ್ಣಿನ ಮಸೂರದಲ್ಲಿ ಊತವನ್ನು ಉಂಟುಮಾಡಿ ದೃಷ್ಟಿ ಸ್ಪಷ್ಟತೆಯನ್ನು ತಗ್ಗಿಸುತ್ತದೆ.
  • ಬೆಳಿಗ್ಗೆ ತಲೆತಿರುಗುವಿಕೆ ಮತ್ತು ದೌರ್ಬಲ್ಯ: ರಕ್ತದ ಸಕ್ಕರೆ ಮಟ್ಟದಲ್ಲಿ ಏರಿಳಿತಗಳು ಬೆಳಿಗ್ಗೆ ತಲೆತಿರುಗುವಿಕೆ, ಕೈಕಾಲಿನ ನಡುಕ ಮತ್ತು ದೌರ್ಬಲ್ಯವನ್ನುಂಟುಮಾಡಬಹುದು.
  • ಒಣ ಬಾಯಿ ಮತ್ತು ಆಗಾಗ್ಗೆ ಬಾಯಾರಿಕೆ: ಹೆಚ್ಚಿದ ಸಕ್ಕರೆಯನ್ನು ಹೊರಹಾಕಲು ದೇಹವು ಹೆಚ್ಚಿನ ನೀರನ್ನು ಬಳಸುವುದರಿಂದ ಬಾಯಾರಿಕೆ ಉಂಟಾಗುತ್ತದೆ.

ಎಚ್ಚರಿಕೆ ಮತ್ತು ತಡೆಗೆ ಕ್ರಮ: ಈ ಲಕ್ಷಣಗಳು ಕಾಣಿಸಿದರೆ ವೈದ್ಯರನ್ನು ಸಂಪರ್ಕಿಸಿ, ಉಪವಾಸದ ರಕ್ತದ ಸಕ್ಕರೆ ಮತ್ತು HbA1c ಪರೀಕ್ಷೆ ಮಾಡಿಸಬೇಕು. ವೈದ್ಯರು ಸೂಚಿಸಿದಂತೆ ಆಹಾರ, ವ್ಯಾಯಾಮ ಮತ್ತು ಜೀವನಶೈಲಿ ಬದಲಾವಣೆಗಳನ್ನು ಅನುಸರಿಸುವ ಮೂಲಕ ಮಧುಮೇಹವನ್ನು ಪ್ರಾರಂಭಿಕ ಹಂತದಲ್ಲಿ ತಡೆಗಟ್ಟಬಹುದು.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

error: Content is protected !!