HEALTH | ತಿನ್ನೋ ಊಟದಲ್ಲಿ ಕರಿಬೇವು ಸಿಕ್ಕರೆ ತೆಗೆದು ಸೈಡ್ ಅಲ್ಲಿ ಇಡ್ತೀರಾ? ಇನ್ಮುಂದೆ ತಿನ್ನೋ ಅಭ್ಯಾಸ ಮಾಡ್ಕೊಳಿ

ಪಲ್ಯಕ್ಕೆ, ಸಾಂಬಾರಿಗೋ, ಕರಿ ಬೇವಿನ ಎಲೆ ಹಾಕಿದರೆ, ಅದನ್ನು ತಿನ್ನುವ ಅಭ್ಯಾಸ ಸಾಮಾನ್ಯವಾಗಿ ನಮಗಿರುವುದಿಲ್ಲ. ಆದರೆ ಇದರ ಹೊರತಾಗಿ ಕರಿಬೇವಿನ ಸೊಪ್ಪು ಆರೋಗ್ಯಕ್ಕೆ ಬಹಳ ಉತ್ತಮ.

ಮುಖ್ಯವಾಗಿ ಕಬ್ಬಿಣ ಮತ್ತು ಫೋಲಿಕ್ ಆಮ್ಲವನ್ನು ಹೊಂದಿರುತ್ತದೆ. ಗರ್ಭಿಣಿಯರು ಮತ್ತು ಹುಡುಗಿಯರಿಗೆ ಇದು ಉಪಯುಕ್ತವಾಗಿದೆ. ಸಾಮಾನ್ಯ ರಕ್ತದ ಕೊರತೆಯ ರಕ್ತಹೀನತೆಯಿಂದ ಬಳಲುತ್ತಿರುವವರು ಕರಿಬೇವಿನ ಎಲೆಗಳನ್ನು ತಿನ್ನಬೇಕು.

ಮದ್ಯಪಾನ ಮಾಡುವವರು ಯಕೃತ್ತು ಮತ್ತು ಮೂತ್ರಪಿಂಡದ ತೊಂದರೆಗಳಿಗೆ ಗುರಿಯಾಗುತ್ತಾರೆ. ಮದ್ಯವ್ಯಸನಿಗಳು ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ಕೆಲವು ಅಧ್ಯಯನಗಳು ತೋರಿಸುತ್ತವೆ.

ಮಧುಮೇಹಿಗಳಿಗೂ ಇದು ರಾಮಬಾಣ. ಕರಿಬೇವಿನ ಎಲೆಗಳು ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ತಡೆಯಲು ಸಹಾಯ ಮಾಡುತ್ತದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಹೇರಳವಾಗಿರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಮೂಗು ಕಟ್ಟುವಿಕೆ ಮತ್ತು ಶ್ವಾಸಕೋಶದ ಸಮಸ್ಯೆಗಳಿಗೆ ಕರಿಬೇವಿನ ಎಲೆಗಳು ಪ್ರಯೋಜನಕಾರಿ. ಚರ್ಮ ಮತ್ತು ಕೂದಲಿನ ಬೆಳವಣಿಗೆಯನ್ನು ರಕ್ಷಿಸಲು ಕರಿಬೇವಿನ ಎಲೆಗಳನ್ನು ಸಹ ಸೇವಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!