HEALTH | ತಿನ್ನುವ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಿದ್ರೆ ಜೀವಕ್ಕೇ ಹಾನಿ..

ನಮ್ಮ ಕುಟುಂಬ, ನಮ್ಮ ಪ್ರೀತಿಪಾತ್ರರು ಖುಷಿಯಾಗಿ ಇರಬೇಕು ಅನ್ನೋದು ನಮ್ಮೆಲ್ಲರ ಆಶಯ, ಆದರೆ ಒಂದು ಸಣ್ಣ ತಪ್ಪು ಜೀವಕ್ಕೇ ಹಾನಿ ಮಾಡುವಂಥ ದೊಡ್ಡ ಸಮಸ್ಯೆ ತರುವಂತೆ ಮಾಡುತ್ತದೆ. ಯಾವ ತಪ್ಪುಗಳ ಬಗ್ಗೆ ಮಾತನಾಡ್ತಿದ್ದೇವೆ ಗೊತ್ತಾ?

  • ಚಿಕನ್, ಮಟನ್, ಮೀನು, ಮೊಟ್ಟೆ ಹಾಗೂ ಯಾವುದೇ ಮಾಂಸವನ್ನು ಬೇಯಿಸದೇ ಅಥವಾ ಅರ್ಧಂಬರ್ಧ ಬೇಯಿಸಿ ತಿನ್ನುವಂತಿಲ್ಲ.
  • ನೀರು ಹಾಕಿ ಕಲಸಿದ ಹಿಟ್ಟು, ದೋಸೆ ಹಿಟ್ಟು, ಚಪಾತಿ ಹಿಟ್ಟು, ಕೇಕ್ ಬ್ಯಾಟರ್ ಹೀಗೆ ಹಿಟ್ಟುಗಳನ್ನು ತಿನ್ನುವಂತಿಲ್ಲ.
  • ಯಾವುದೇ ಆಹಾರವನ್ನು ಮ್ಯಾರಿನೇಟ್ ಮಾಡುವಾಗ ಫ್ರಿಡ್ಜ್‌ನಲ್ಲಿಯೇ ಇಡಬೇಕು, ರೂಂ ಟೆಂಪರೇಚರ್‌ನಲ್ಲಿ ಬೇಗ ಜರ್ಮ್ಸ್ ಹರಡುತ್ತವೆ.
  • ಬೆಳಗ್ಗೆ ಮಾಡಿದ ಆಹಾರ ಉಳಿದರೆ, ತಿಂಡಿ ಆದ ನಂತರ ಫ್ರಿಡ್ಜ್‌ನಲ್ಲಿಡಿ, ಮಧ್ಯಾಹ್ನ ಫ್ರಿಡ್ಜ್‌ನಲ್ಲಿ ಇಡಬೇಡಿ.
  • ಮೊದಲು ಹಣ್ಣು, ತರಕಾರಿಗಳನ್ನು ತೊಳೆದ ನಂತರ ಸಿಪ್ಪೆ ತೆಗೆಯಿರಿ. ತೊಳೆಯದೇ ಸಿಪ್ಪೆ ತೆಗೆದು ತಿನ್ನಬೇಡಿ.
  • ಊಟ ಮಾಡುವ ಅಥವಾ ಅಡುಗೆ ಮಾಡುವ ಮುನ್ನ ಕೈ ತೊಳೆಯದೇ ಇರುವುದು ತಪ್ಪು
  • ಊಟ ಹಾಳಾಗಿದ್ಯಾ? ಚೆನ್ನಾಗಿದ್ಯಾ ಅಂತ ಚೆಕ್ ಮಾಡೋದಕ್ಕೆ ಆಹಾರವನ್ನು ಮೂಸೋದು, ಒಂದೇ ಸ್ಪೂನ್ ತಿಂದು ನೋಡೋದು ಕೂಡ ತಪ್ಪು, ಒಂದು ಸ್ಪೂನ್ ಕೆಟ್ಟ ಆಹಾರ ಕೂಡ ನಿಮ್ಮನ್ನು ಅನಾರೋಗ್ಯಕ್ಕೆ ದೂಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!