ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ಜೀವನಶೈಲಿ, ಆಹಾರ ನಿಯಂತ್ರಣ ಇಲ್ಲದೆ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಉತ್ತಮ ನಿದ್ರೆ ಪಡೆಯಲು ಕೆಲವು ಮಾರ್ಗಗಳಿವೆ. ಅವುಗಳನ್ನು ಅನುಸರಿಸುವುದರಿಂದ ಯಾವುದೇ ಚಿಂತೆಯಿಲ್ಲದೆ ಮಲಗಲು ಸಾಧ್ಯವಾಗುತ್ತದೆ.
- ಮಲಗುವ ಮುನ್ನ 5 ನಿಮಿಷಗಳ ಕಾಲ ನಿಮ್ಮ ನೆಚ್ಚಿನ ಸಂಗೀತವನ್ನು ಕೇಳುವುದರಿಂದ ನಿಮ್ಮ ಮನಸ್ಸಿಗೆ ಸಂತೋಷವಾಗುತ್ತದೆ. ಹಾಗೆಯೇ ನಿದ್ರೆಗೆ ಜಾರುವ ಸಾಧ್ಯತೆಯಿರುತ್ತದೆ. ಬೆಳಗ್ಗೆ ಎದ್ದ ನಂತರವೂ ಚಟುವಟಿಕೆಯಿಂದ ಇರುತ್ತಾರೆ.
- ನೀವು ಮಲಗುವ ಮುನ್ನ 3 ನಿಮಿಷಗಳ ಕಾಲ ಉಸಿರಾಟದ ವ್ಯಾಯಾಮ ಮಾಡಿ. ಹೀಗೆ ಮಾಡುವುದರಿಂದ ಅಲ್ಲಿಯವರೆಗಿನ ಎಲ್ಲಾ ಚಿಂತೆಗಳನ್ನು ಮರೆಯಲು ಸಾಧ್ಯವಾಗುತ್ತದೆ. ಮೇಲಾಗಿ ಪ್ರತಿದಿನ ಹೀಗೆ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಕೆಟ್ಟ ಆಲೋಚನೆಗಳು ದೂರವಾಗುತ್ತವೆ.
- ನಿಮ್ಮ ಕುಟುಂಬ ಸದಸ್ಯರೊಂದಿಗೆ ಹರಟೆ ಹೊಡೆಯಿರಿ. ಅಗತ್ಯವಿದ್ದರೆ ಅವರೊಂದಿಗೆ ತಮಾಷೆ ಮಾಡಿ, ಮಕ್ಕಳೊಂದಿಗೆ ಆಟವಾಡಿ. ಹೀಗೆ ಮಾಡುವುದರಿಂದ ದೇಹ ನಿರಾಳವಾಗುತ್ತದೆ. ಇದರಿಂದ ನೀವು ಯಾವುದೇ ಒತ್ತಡವಿಲ್ಲದೆ ಆರಾಮವಾಗಿ ಮಲಗುತ್ತೀರಿ.
- ಪುಸ್ತಕ ಓದುವುದರಿಂದ ಮನಸ್ಸು ಶಾಂತವಾಗುತ್ತದೆ. ಒಳ್ಳೆಯ ಕಥೆ ಪುಸ್ತಕ ಓದುವುದು ತುಂಬಾ ಸಮಾಧಾನಕರ. ಹಾಗಾಗಿ ಪ್ರತಿದಿನ ರಾತ್ರಿ ಮಲಗುವ ಮುನ್ನ ನಿಮ್ಮ ನೆಚ್ಚಿನ ಪುಸ್ತಕವನ್ನು ಓದುವುದನ್ನು ರೂಢಿಸಿಕೊಳ್ಳಿ.
- ಪೌಷ್ಠಿಕಾಂಶವಿರುವ ಆಹಾರವನ್ನು ಸೇವಿಸುವುದನ್ನು ಮರೆಯಬೇಡಿ