ನಾವು ಹಾಸಿಗೆ, ಸೋಫಾದ ಮೇಲೆ ಮಲಗಿ ಬೆನ್ನು ನೋವು, ಕತ್ತುನೋವು ಎಂದು ಬದುಕುತ್ತಿದ್ದರೂ, ನಮ್ಮ ಪೂರ್ವಜರು ದಶಕಗಳ ಕಾಲ ನೆಲದ ಮೇಲೆಯೇ ಮಲಗಿ ಆರೋಗ್ಯವಂತರಾಗಿದ್ದರು. ಏಕೆಂದರೆ ಅದು ಕೇವಲ ಒಂದು ಅಭ್ಯಾಸವಲ್ಲ, ದೇಹದ ಆರೋಗ್ಯವನ್ನು ಉತ್ತಮಗೊಳಿಸುವ ಪ್ರಕೃತಿಯೊಂದಿಗಿನ ನೇರ ಸಂಪರ್ಕ!
ಈ ಲೇಖನದಲ್ಲಿ, ನೆಲದ ಮೇಲೆ ಮಲಗುವುದರಿಂದ ದೇಹಕ್ಕೆ ಸಿಗುವ ಪ್ರಮುಖ ಲಾಭಗಳನ್ನು ತಿಳಿಯೋಣ!
ಹೆಚ್ಚಿನ ಶರೀರ ಬೆಂಬಲ
ನೆಲದ ಮೇಲ್ಮೈ ಅಂಕುಡೊಂಕಿಲ್ಲದೆ ಸಮಾನವಾಗಿರುತ್ತದೆ. ಇದು ದೇಹದ ಸರಿಯಾದ ಭಂಗಿಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಇದರಿಂದ ಶರೀರಕ್ಕೆ ಒಂದು ರೀತಿಯ ಬೆಂಬಲ ದೊರೆಯುತ್ತದೆ.
ಮೂಳೆ ಮತ್ತು ಕೀಲುಗಳಿಗೆ ಉಪಯುಕ್ತ
ಮೃದುವಾದ ಹಾಸಿಗೆಗಳಲ್ಲಿ ಮಲಗುವಾಗ ಬೆನ್ನಿನ ಮೇಲೆ ಹೆಚ್ಚಿನ ಒತ್ತಡ ಬೀಳಬಹುದು. ಆದರೆ ನೆಲದಲ್ಲಿ ಮಲಗುವುದರಿಂದ ಹಾಗಾಗುವುದಿಲ್ಲ. ಕೀಲುಗಳ ನೋವು, ಬೆನ್ನುನೋವಿಗೆ ಉತ್ತಮ ಪರಿಹಾರವಾಗಬಹುದು.
ರಕ್ತ ಪ್ರವಾಹ ಸುಧಾರಣೆ
ನೆಲದಲ್ಲಿ ಮಲಗುವುದು ಒಂದು ಅರೋಗ್ಯಕರ ಅಭ್ಯಾಸ. ಇದು ನಮ್ಮ ದೇಹದಳ್ಳಿ ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ.
ನಿದ್ದೆಯ ಗುಣಮಟ್ಟ ಸುಧಾರಣೆ
ನೆಲದ ಮೇಲ್ಮೈ ತಂಪಾಗಿರುತ್ತದೆ, ಇದು ದೇಹದ ಉಷ್ಣತೆಯನ್ನು ಸಮತೋಲನಗೊಳಿಸಿ, ಉತ್ತಮ ನಿದ್ರೆ ನೀಡುತ್ತದೆ.
ಭೂಮಿಯ ಜೊತೆ ಸಂಪರ್ಕ
ನೆಲದ ಮೇಲೆ ಮಲಗುವ ಮೂಲಕ ಭೂಮಿ ಶಕ್ತಿಯೊಂದಿಗೆ (grounding energy) ದೇಹದ ಸಂಪರ್ಕ ಹೆಚ್ಚುತ್ತದೆ. ಇದು ದೇಹದಲ್ಲಿ ಉತ್ತಮವಾದ ಶಕ್ತಿಯನ್ನು ಹೆಚ್ಚಿಸುತ್ತದೆ.
ಬೆನ್ನುನೋವಿಗೆ ಪರಿಹಾರ
ಮೃದು ಹಾಸಿಗೆಗಳಲ್ಲಿ ಮಲಗುವುದರಿಂದ ಬೆನ್ನಿಗೆ ಹೆಚ್ಚು ಬಲ ಬಿದ್ದು ನೋವು ಉಂಟಾಗಬಹುದು. ನೆಲದ ಮೇಲೆ ಮಲಗುವುದು ಬೆನ್ನುನೋವನ್ನು ಕಡಿಮೆ ಮಾಡುತ್ತದೆ.
ಸರಿಯಾದ ಭಂಗಿ ನೀಡುತ್ತದೆ
ನೆಲದ ಮೇಲೆ ಮಲಗುವುದರಿಂದ ದೇಹ ಸರಿಯಾದ ಸ್ಥಿತಿಯಲ್ಲಿ ಇರುತ್ತದೆ, ಇದು ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಬಾರದಂತೆ ತಡೆಯುತ್ತದೆ ಮತ್ತು ದಿನಪೂರ್ತಿ ಚೈತನ್ಯ ನೀಡುತ್ತದೆ.
ಆರಂಭದಲ್ಲಿ ನೆಲದ ಮೇಲೆ ಮಲಗಲು ಸ್ವಲ್ಪ ಸಮಯ ಹಿಡಿಯಬಹುದು, ಆದ್ದರಿಂದ ಹಠಾತ್‌ನೆ ನೆಲದಲ್ಲಿ ಮಲಗುವುದನ್ನು ಪ್ರಾರಂಭಿಸದೆ ನಿಧಾನವಾಗಿ ಸರಿಹೊಂದಿಸಿಕೊಳ್ಳಿ. ಒಟ್ಟಾರೆ, ನೆಲದಲ್ಲಿ ಮಲಗುವುದರಿಂದ ದೇಹಕ್ಕೆ ಸಹಜ ಬೆಂಬಲ, ಉತ್ತಮ ನಿದ್ರೆ ಮತ್ತು ಆರೋಗ್ಯ ಸುಧಾರಣೆ ಆಗಬಹುದು!