ಕರುಳಿನಲ್ಲಿ ಲಕ್ಷಾಂತರ ಸೂಕ್ಷ್ಮಾಣು ಬ್ಯಾಕ್ಟೀರಿಯಾಗಳು ನೆಲೆಸಿರುವುದು ಎಲ್ಲರಿಗೂ ತಿಳಿದಿಲ್ಲ. ಈ ಸಸ್ಯಜನ್ಯ ಬ್ಯಾಕ್ಟೀರಿಯಾ ಅಥವಾ “ಗುಡ್ ಬ್ಯಾಕ್ಟೀರಿಯಾ”ಗಳು ಕರುಳಿನ ಆರೋಗ್ಯ (Gut) ವನ್ನು ಕಾಪಾಡಲು ಬಹಳ ಮುಖ್ಯವಾದ ಪಾತ್ರ ವಹಿಸುತ್ತವೆ. ಇವು ನಮ್ಮ ಜೀರ್ಣಕ್ರಿಯೆ ವ್ಯವಸ್ಥೆ, ರೋಗ ನಿರೋಧಕ ಶಕ್ತಿ ಮತ್ತು ಮಾನಸಿಕ ಆರೋಗ್ಯದಲ್ಲಿಯೂ ಸಹಕಾರಿಯಾಗಿವೆ. ಸರಿಯಾದ ಆಹಾರ ಹಾಗೂ ಜೀವನಶೈಲಿ ಆಯ್ಕೆಗಳಿಂದ ಈ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸಬಹುದು.
ಪ್ರೋಬಯಾಟಿಕ್ ಅಹಾರ
ಪ್ರೋಬಯಾಟಿಕ್ಸ್ ಎಂದರೆ ಜೀವಂತ ಉತ್ತಮ ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಆಹಾರಗಳು. ಮೊಸರು, ಬಟರ್ ಮಿಲ್ಕ್, ಫರ್ಮೆಂಟೆಡ್ ಮಾಡಿದ ಆಹಾರಗಳು ನೇರವಾಗಿ ನಮ್ಮ ಕರುಳಿನ ಬ್ಯಾಕ್ಟೀರಿಯಾ ಸಮತೋಲನವನ್ನು ಹೆಚ್ಚಿಸುತ್ತವೆ.
ಪ್ರೀಬಯಾಟಿಕ್ ಆಹಾರ
ಪ್ರೀಬಯಾಟಿಕ್ಸ್ ಎಂದರೆ ಉತ್ತಮ ಬ್ಯಾಕ್ಟೀರಿಯಾ ಬೆಳವಣಿಗೆಗೆ ಬೇಕಾಗುವ ತತ್ತ್ವಗಳು. ಬೆಳ್ಳುಳ್ಳಿ, ಈರುಳ್ಳಿ, ಬಾಳೆಹಣ್ಣು, ಅವರೆಕಾಯಿ, ಗೋಧಿಹಿಟ್ಟು ಮುಂತಾದವುಗಳಲ್ಲಿ ಪ್ರೀಬಯಾಟಿಕ್ ಫೈಬರ್‌ಗಳಿವೆ. ಇವು ಗುಡ್ ಬ್ಯಾಕ್ಟೀರಿಯಾಗಳನ್ನು ಬೆಳೆಯಲು ಸಹಾಯ ಮಾಡುತ್ತವೆ.
ಫಾಸ್ಟ್ ಫುಡ್ ಆಹಾರ ಸೇವನೆ ನಿಲ್ಲಿಸಿ
ಜಂಕ್ ಫುಡ್ ಅಥವಾ ಹೆಚ್ಚು ಪ್ರಕ್ರಿಯೆಗೊಳಿಸಿದ ಆಹಾರಗಳು (ಅಥವಾ ಫಾಸ್ಟ್ ಫುಡ್) ಆಂತರದ ಉತ್ತಮ ಬ್ಯಾಕ್ಟೀರಿಯಾದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹಾಲು ಉತ್ಪನ್ನಗಳು, ಹಣ್ಣುಗಳು, ತರಕಾರಿ ಹಾಗೂ ಸಂಪೂರ್ಣ ಧಾನ್ಯಗಳಿಂದ ಕೂಡಿದ ಆಹಾರಗಳು ಹೆಚ್ಚಿನ ಪ್ರಾಯೋಜನ ನೀಡುತ್ತವೆ.
ಅನಗತ್ಯವಾದ ಆಂಟಿಬಯೋಟಿಕ್ ಬಳಕೆಯಿಂದ ದೂರವಿರಿ
ಆಂಟಿಬಯೋಟಿಕ್‌ಗಳು ದೇಹದಲ್ಲಿನ ಎಲ್ಲಾ ಬ್ಯಾಕ್ಟೀರಿಯಾ ಉತ್ತಮ ಹಾಗೂ ಕೆಟ್ಟ ಎರಡನ್ನೂ ನಾಶ ಮಾಡುತ್ತವೆ. ವೈದ್ಯರ ಸಲಹೆಯಿಲ್ಲದೆ ಅದನ್ನು ಬಳಸಬಾರದು. ಅವಶ್ಯಕವಿದ್ದಾಗ ಮಾತ್ರ ಬಳಸುವುದು ಉತ್ತಮ.
ನಿತ್ಯ ವ್ಯಾಯಾಮ ಮತ್ತು ಒತ್ತಡದ ನಿಯಂತ್ರಣ
ವ್ಯಾಯಾಮ ಮತ್ತು ಧ್ಯಾನದಂತಹ ಚಟುವಟಿಕೆಗಳು ಕರುಳಿನ ಬ್ಯಾಕ್ಟೀರಿಯಾ ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಸಹಕಾರಿಯಾಗಿವೆ. ತೀವ್ರ ಒತ್ತಡವು gut health ಮೇಲೆ ನೇರ ಪ್ರಭಾವ ಬೀರುತ್ತದೆ. ಧ್ಯಾನ, ಯೋಗ ಅಥವಾ ನಡಿಗೆ ಒತ್ತಡವನ್ನು ತಗ್ಗಿಸಿ ಉತ್ತಮ ಬಾಕ್ಟೀರಿಯಾ ಬೆಳವಣಿಗೆಗೆ ನೆರವಾಗುತ್ತವೆ.
ಕರುಳಿನ ಆರೋಗ್ಯವನ್ನು ಉತ್ತಮಪಡಿಸಲು ನಾವು ದಿನನಿತ್ಯದ ಆಹಾರ ಮತ್ತು ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ತಂದು ಉತ್ತಮ ಬ್ಯಾಕ್ಟೀರಿಯಾ ಬೆಳವಣಿಗೆಗೆ ಸಹಾಯ ಮಾಡಬಹುದು. ಇದು ದೀರ್ಘಕಾಲದ ಆರೋಗ್ಯಕ್ಕೆ ಉತ್ತಮ ಹಾದಿಯಾಗುತ್ತದೆ.