January18, 2026
Sunday, January 18, 2026
spot_img

HEALTH | ಹವೀಜ ಟೀ ಅಂದ್ರೇನು? ಇದ್ರಿಂದ ಆರೋಗ್ಯಕ್ಕೆ ಏನು ಲಾಭ?

ದಿನನಿತ್ಯ ಬಳಸುವ ಹವೀಜ ಕೇವಲ ಅಡುಗೆಯಲ್ಲಿ ರುಚಿ ಹೆಚ್ಚಿಸುವುದಕ್ಕೆ ಮಾತ್ರವಲ್ಲ, ಆರೋಗ್ಯ ಕಾಪಾಡುವ ನೈಸರ್ಗಿಕ ಔಷಧಿಯೂ ಆಗಿದೆ. ಹವೀಜದ ಬೀಜಗಳಿಂದ ತಯಾರಿಸಿದ ಟೀ ದೇಹಕ್ಕೆ ಹಲವು ರೀತಿಯ ಲಾಭಗಳನ್ನು ನೀಡುತ್ತದೆ. ಪಚನ ಕ್ರಿಯೆಯಿಂದ ಹಿಡಿದು ತೂಕ ನಿಯಂತ್ರಣದವರೆಗೆ, ಸಕ್ಕರೆ ಕಾಯಿಲೆ ನಿಯಂತ್ರಣದಿಂದ ತ್ವಚೆಯ ಕಾಂತಿಯವರೆಗೆ ಅನೇಕ ಸಮಸ್ಯೆಗಳಿಗೆ ಹವೀಜ ಟೀ ಒಂದು ಉತ್ತಮ ಪರಿಹಾರವೆಂದು ತಜ್ಞರು ಹೇಳುತ್ತಾರೆ.

ಈ ಹವೀಜ ಟೀ ಅಂದ್ರೇನು ಗೊತ್ತಾ?
ಹವೀಜ ಟೀ ಎಂದರೆ ಧನಿಯಾ/ಕೊತ್ತಂಬರಿ ಬೀಜದಿಂದ ತಯಾರಿಸಿದ ಟೀ ಆಗಿದೆ. ಇದು ಆರೋಗ್ಯಕ್ಕೆ ಹಲವಾರು ಲಾಭಗಳನ್ನು ನೀಡುತ್ತದೆ.

ಪಚನಕ್ರಿಯೆಗೆ ಸಹಾಯಕ

ಹವೀಜ ಟೀ ಸೇವನೆಯು ಪಚನಕ್ರಿಯೆಯನ್ನು ಬಲಪಡಿಸುತ್ತದೆ. ಇದು ಹೊಟ್ಟೆಯಲ್ಲಿ ಜೀರ್ಣಕಾರಿ ಕಿಣ್ವಗಳನ್ನು ಹೆಚ್ಚಿಸುವುದರಿಂದ ಆಹಾರ ಸರಿಯಾಗಿ ಜೀರ್ಣವಾಗಲು ನೆರವಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗಲು ಸಹ ಸಹಕಾರಿ.

ದೇಹಕ್ಕೆ ನೈಸರ್ಗಿಕ ಡಿಟಾಕ್ಸ್

ಹವೀಜ ಟೀಯಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್ಸ್ ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದುಹಾಕುತ್ತವೆ. ಇದರಿಂದ ದೇಹದಲ್ಲಿ ಸ್ವಚ್ಛತೆ ಉಂಟಾಗುತ್ತದೆ ಮತ್ತು ಯಕೃತ್ ಆರೋಗ್ಯ ಸುಧಾರಿಸುತ್ತದೆ.

ತ್ವಚೆಯ ಕಾಂತಿ ಹೆಚ್ಚಿಸುವುದು

ಚರ್ಮದ ಹೊಳಪಿಗಾಗಿ ಹವೀಜ ಟೀ ಒಂದು ಉತ್ತಮ ಆಯ್ಕೆ. ಇದರಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್ಸ್ ಹಾಗೂ ಉರಿಯೂತ ವಿರೋಧಿ ಗುಣಗಳು ತ್ವಚೆಯ ಆರೋಗ್ಯ ಕಾಪಾಡುತ್ತವೆ. ನಿಯಮಿತ ಸೇವನೆಯಿಂದ ಮುಖದ ಕಾಂತಿ ಹೆಚ್ಚುತ್ತದೆ.

ಸಕ್ಕರೆ ಕಾಯಿಲೆ ನಿಯಂತ್ರಣ

ಹವೀಜ ಟೀ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಕಾರಿ. ಇತ್ತೀಚಿನ ಅಧ್ಯಯನಗಳ ಪ್ರಕಾರ, ನಿರಂತರ ಹವೀಜ ಸೇವನೆಯು ಸಕ್ಕರೆ ಕಾಯಿಲೆಯ ರೋಗಿಗಳಿಗೆ ನೆರವಾಗುತ್ತದೆ.

ತೂಕ ನಿಯಂತ್ರಣಕ್ಕೆ ನೆರವು

ಹವೀಜ ಟೀ ಸೇವನೆಯು ಅನಗತ್ಯ ಹಸಿವು ಕಡಿಮೆ ಮಾಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಿ ತೂಕ ನಿಯಂತ್ರಣಕ್ಕೆ ಸಹಾಯಕವಾಗುತ್ತದೆ.

Must Read

error: Content is protected !!