January22, 2026
Thursday, January 22, 2026
spot_img

HEALTH | ಹೆಪಟೈಟಿಸ್ B ಅಂದ್ರೇನು? ಇದರ ಲಕ್ಷಣಗಳೇನು?

ಯಕೃತ್‌ಗೆ ಗಂಭೀರ ಹಾನಿಯನ್ನುಂಟುಮಾಡಬಲ್ಲ ಹೆಪಟೈಟಿಸ್ B ಸೋಂಕು ಕಲುಷಿತ ಆಹಾರ ಮತ್ತು ನೀರಿನಿಂದ ಹರಡುವ ವೈರಲ್ ರೋಗವಾಗಿದೆ. ಭಾರತದಲ್ಲೂ ಇದರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಜಾಗೃತಿ ಮೂಡಿಸುವ ಅಗತ್ಯ ತುಂಬಾ ಅವಶ್ಯಕವಾಗಿದೆ. ಸೋಂಕು ದೀರ್ಘಕಾಲ ದೇಹದಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇರುವುದರಿಂದ ಕಾಲಮಿತಿಯಲ್ಲೇ ಪರೀಕ್ಷೆ ಮತ್ತು ಚಿಕಿತ್ಸೆ ಪಡೆದುಕೊಳ್ಳೋದು ಅತ್ಯಂತ ಮುಖ್ಯ.

ಹೆಪಟೈಟಿಸ್ B ಪ್ರಾರಂಭದ ಲಕ್ಷಣಗಳು ಸಾಮಾನ್ಯ ಜ್ವರ ಅಥವಾ ಜೀರ್ಣದ ತೊಂದರೆಯಂತೆ ಕಾಣುವ ಕಾರಣ ಹಲವಾರು ಮಂದಿ ಅದನ್ನು ನಿರ್ಲಕ್ಷಿಸುವುದು ಸಾಮಾನ್ಯ. ಮುಖ್ಯವಾಗಿ ದಣಿವು, ವಾಂತಿ, ಹೊಟ್ಟೆನೋವು, ಹಸಿವು ಕಡಿಮೆಯಾಗುವುದು, ಕಣ್ಣು ಮತ್ತು ಚರ್ಮ ಹಳದಿಯಾಗುವುದು ಮೊದಲ ಲಕ್ಷಣಗಳಾಗಿ ಕಾಣಿಸಿಕೊಳ್ಳುತ್ತವೆ.

ರೋಗದ ತೀವ್ರತೆ ಹೆಚ್ಚಿದಾಗ ಯಕೃತ್ ಹಾನಿ, ಸಿರೋಷಿಸ್ ಅಥವಾ ಲಿವರ್ ಕ್ಯಾನ್ಸರ್ ಉಂಟಾಗುವ ಅಪಾಯವಿದ್ದು, ಇದನ್ನು ತಡೆಗಟ್ಟಲು ಲಸಿಕೆ ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ಆರೋಗ್ಯತಜ್ಞರು ತಿಳಿಸುತ್ತಿದ್ದಾರೆ. ಸೋಂಕಿನ ಶಂಕೆ ಇದ್ದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಮತ್ತು ಪರೀಕ್ಷೆಗೊಳಗಾಗುವುದು ಜೀವ ರಕ್ಷಕವಾಗಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

Must Read