ನಿಯಮಿತವಾಗಿ ಮೊಸರು ಸೇವಿಸುವುದರಿಂದ ನಿಮ್ಮ ಆರೋಗ್ಯವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಇದು ದೇಹಕ್ಕೆ ಒಂದಕ್ಕಿಂತ ಹೆಚ್ಚು ಅಥವಾ ಎರಡು ಪ್ರಯೋಜನಗಳನ್ನು ಹೊಂದಿದೆ.
ಪ್ರತಿನಿತ್ಯ ಮೊಸರು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಒಂದು ಹೊತ್ತಿಗೆ ದಪ್ಪ ಮೊಸರಿನೊಂದಿಗೆ ಅನ್ನ ಕಲಸಿಕೊಟ್ಟರೆ ಮೈ ಕೈ ತುಂಬಿಕೊಳ್ಳುತ್ತದೆ ಹಾಗೂ ಪದೇ ಪದೇ ವೈದ್ಯರನ್ನು ಭೇಟಿಯಾಗುವುದೂ ತಪ್ಪುತ್ತದೆ.
ಮೊಸರು ಅಧಿಕ ರಕ್ತದೊತ್ತಡವನ್ನು ತಡೆಯುತ್ತದೆ ಮತ್ತು ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ. ಇದು ಬಹಳಷ್ಟು ಕ್ಯಾಲ್ಸಿಯಂ ಅನ್ನು ಹೊಂದಿದ್ದು ಅದು ನಿಮ್ಮ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ.