ಸಾಮಾಗ್ರಿಗಳು
ಬೋನ್ ಲೆಸ್ ಚಿಕನ್- 1 ಕೆಜಿ, ಮೈದಾ- 5 ಚಮಚ,ಉಪ್ಪು- ಅರ್ಧ ಚಮಚ, ಈರುಳ್ಳಿ ಪುಡಿ- 1 ಚಮಚ, ಶುಂಠಿ ಪುಡಿ- 1 ಚಮಚ, ಬೆಳ್ಳುಳ್ಳಿ ಪುಡಿ- 1 ಚಮಚ ಅಚ್ಚ ಖಾರದ ಪುಡಿ- 1 ಚಮಚಮೊಸರು- 1 ಬಟ್ಟಲು ಕಾರ್ನ್‌ಫ್ಲೇಕ್ಸ್- 2 ಬಟ್ಟಲು ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
ಮಾಡುವ ವಿಧಾನ
ಮೊದಲಿಗೆ ಚಿಕನ್ ಅನ್ನು ಒಂದೊಂದು ಇಂಚಿನಷ್ಟು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.
ನಂತರ ಒಂದು ಮಧ್ಯಮ ಬಟ್ಟಲಿನಲ್ಲಿ ಮೈದಾ ಹಿಟ್ಟು, ಉಪ್ಪು, ಈರುಳ್ಳಿ ಪುಡಿ, ಶುಂಠಿ ಹಾಗೂ ಬೆಳ್ಳುಳ್ಳಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ.ಮತ್ತೊಂದು ಬಟ್ಟಲಿನಲ್ಲಿ ಮೊಸರನ್ನು ಹಾಕಿ ಬದಿಗಿಡಿ. ತಟ್ಟೆಯಲ್ಲಿ ಕಾರ್ನ್‌ಫ್ಲೇಕ್ಸ್ ಅನ್ನು ಪುಡಿ ಮಾಡಿ ಇಟ್ಟಿರಿ.
ಇದೀಗ ಚಿಕನ್ ತುಂಡುಗಳನ್ನು ಮೈದಾ ಹಿಟ್ಟಿನ ಮಿಶ್ರಣಕ್ಕೆ ಹಾಕಿ ಪೂರ್ತಿಯಾಗಿ ಕೋಟ್ ಮಾಡಿ. ಒಂದೊಂದೇ ಚಿಕನ್ ತುಂಡುಗಳನ್ನು ಮೊಸರಿನಲ್ಲಿ ಅದ್ದಿ, ತೆಗೆಯಿರಿ. ಹೆಚ್ಚುವರಿ ಮೊಸರು ಚಿಕನ್ ತುಂಡಿನಿಂದ ಇಳಿದು ಹೋಗುವಂತೆ ಬಿಡಿ.
ಇದೀಗ ಕಾರ್ನ್‌ಫ್ಲೇಕ್ಸ್ ಪುಡಿಯಲ್ಲಿ ಚಿಕನ್‌ನ ಒಂದೊಂದೇ ತುಂಡನ್ನು ಹಾಕಿ ಉರುಳಿಸಿ ಕೋಟ್ ಮಾಡಿ. ಚಿಕನ್ ತುಂಡುಗಳನ್ನು ಬ್ಯಾಚ್‌ಗಳಲ್ಲಿ ಬಿಸಿ ಎಣ್ಣೆಯಲ್ಲಿ ಬಿಟ್ಟು ಡೀಪ್ ಫ್ರೈ ಮಾಡಿ.ಚಿಕನ್ ಚೆನ್ನಾಗಿ ಬೆಂದು, ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ. ಇದೀಗ ರುಚಿಕರವಾದ ಚಿಕನ್ ಪಾಪ್‌ಕಾರ್ನ್ ಸವಿಯಲು ಸಿದ್ಧ.