ಶಂಖಪುಷ್ಪ ಹೂವಿನ ಚಹಾ ಮಾಡೋದು ತುಂಬಾನೇ ಸುಲಭ. ಇಲ್ಲಿದೆ ನೋಡಿ ಸಿಂಪಲ್ ರೆಸಿಪಿ:
ಬೇಕಾಗುವ ಸಾಮಗ್ರಿಗಳು:
ಒಂದು ಕಪ್ ನೀರು
5-6 ಒಣಗಿಸಿದ ಶಂಖಪುಷ್ಪ ಹೂವುಗಳು
ರುಚಿಗೆ ತಕ್ಕಷ್ಟು ಜೇನುತುಪ್ಪ ಅಥವಾ ಸಕ್ಕರೆ
ಕೆಲವು ಹನಿ ನಿಂಬೆ ರಸ
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ಕುದಿಯುತ್ತಿರುವ ನೀರಿಗೆ ಒಣಗಿಸಿದ ಅಥವಾ ತಾಜಾ ಶಂಖಪುಷ್ಪ ಹೂವುಗಳನ್ನು ಹಾಕಿ. ಉರಿಯನ್ನು ಕಡಿಮೆ ಮಾಡಿ 3-5 ನಿಮಿಷಗಳ ಕಾಲ ಹೂವುಗಳನ್ನು ನೀರಿನಲ್ಲಿ ಚೆನ್ನಾಗಿ ನೆನೆಯಲು ಬಿಡಿ. ನೀರು ತಿಳಿ ನೀಲಿ ಬಣ್ಣಕ್ಕೆ ತಿರುಗುವುದನ್ನು ಗಮನಿಸಿ. ಚಹಾವನ್ನು ಒಂದು ಕಪ್‌ಗೆ ಸೋಸಿಕೊಳ್ಳಿ. ಹೂವುಗಳನ್ನು ತೆಗೆದುಹಾಕಿ. ಬೇಕಿದ್ದರೆ ರುಚಿಗೆ ತಕ್ಕಷ್ಟು ಜೇನುತುಪ್ಪ ಅಥವಾ ಸಕ್ಕರೆ ಸೇರಿಸಿ. ಬಣ್ಣ ಬದಲಾವಣೆ ಮತ್ತು ವಿಭಿನ್ನ ರುಚಿಗಾಗಿ ಕೆಲವು ಹನಿ ನಿಂಬೆ ರಸವನ್ನು ಹಿಂಡಿ. ನಿಂಬೆ ರಸ ಸೇರಿಸಿದ ತಕ್ಷಣ ನೀಲಿ ಬಣ್ಣವು ನೇರಳೆ ಬಣ್ಣಕ್ಕೆ ತಿರುಗುತ್ತದೆ. ಬಿಸಿ ಬಿಸಿಯಾಗಿ ಅಥವಾ ತಣ್ಣಗಾಗಿಸಿ ಸವಿಯಿರಿ.