ಬೇಕಾಗುವ ಸಾಮಗ್ರಿಗಳು:
ಪುದೀನಾ-1 ಕಪ್, ಲಿಂಬೆಹಣ್ಣಿನ ರಸ-1/4 ಕಪ್, ಕಾಳುಮೆಣಸಿನ ಪುಡಿ-1/4 ಟೀ ಸ್ಪೂನ್, ಉಪ್ಪು-1/4 ಟೀ ಸ್ಪೂನ್, ಸಕ್ಕರೆ-1 ಕಪ್, ಐಸ್ ಕ್ಯೂಬ್, ಕೋಲ್ಡ್ ನೀರು-2 ಗ್ಲಾಸ್.
ಮಾಡುವ ವಿಧಾನ:
1 ಕಪ್ ಪುದೀನ ಎಲೆಗಳು, ನಿಂಬೆ ರಸ, ಕಾಳುಮೆಣಸಿನ ಪುಡಿ, ಉಪ್ಪು, ಸಕ್ಕರೆ, ಐಸ್ ಕ್ಯೂಬ್ ಮತ್ತು ತಣ್ಣೀರು ಹಾಕಿ ಬ್ಲೆಂಡರ್ನಲ್ಲಿ ಮಿಶ್ರಣ ಮಾಡಿ. ನಂತರ ಸರ್ವಿಂಗ್ ಗ್ಲಾಸ್‌ನಲ್ಲಿ 2 ಐಸ್ ಕ್ಯೂಬ್‌ಗಳನ್ನು ಹಾಕಿ, ಸಿದ್ಧಪಡಿಸಿದ ಜ್ಯೂಸ್ ಹಾಕಿ, 2 ಪುದೀನ ಎಲೆಗಳನ್ನು ಹಾಕಿ ಸವಿಯಿರಿ.