Healthy Drinks | ನೀವು ಒಮ್ಮೆಯಾದ್ರೂ ದಾಳಿಂಬೆ ಚಹಾ ಟೇಸ್ಟ್ ಮಾಡಿದ್ದೀರಾ? ಮಿಸ್ ಮಾಡ್ದೆ ಟ್ರೈ ಮಾಡಿ

ಬೇಕಾಗುವ ಪದಾರ್ಥಗಳು:

ಒಂದು ದಾಳಿಂಬೆ 1
2 ಕಪ್ ನೀರು
1 ಇಂಚು ಶುಂಠಿ (ತುರಿದುಕೊಂಡಿದ್ದು)
1/2 ನಿಂಬೆ ಹಣ್ಣಿನ ರಸ
1 ಚಮಚ ಜೇನುತುಪ್ಪ
1 ಚಿಟಿಕೆ ದಾಲ್ಚಿನ್ನಿ ಪುಡಿ

ಮಾಡುವ ವಿಧಾನ:

ಮೊದಲಿಗೆ, ದಾಳಿಂಬೆ ಹಣ್ಣಿನಿಂದ ಬೀಜಗಳನ್ನು ಬೇರ್ಪಡಿಸಿ. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ, ಅದಕ್ಕೆ ತುರಿದ ಶುಂಠಿ ಮತ್ತು ದಾಳಿಂಬೆ ಬೀಜಗಳನ್ನು ಸೇರಿಸಿ. ಈ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಸುಮಾರು 10-15 ನಿಮಿಷಗಳ ಕಾಲ ಕುದಿಸಿ. ನಂತರ, ಉರಿಯನ್ನು ಆರಿಸಿ, ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ. ಈ ಮಿಶ್ರಣವನ್ನು ಒಂದು ಸೋಸುವ ಜಾಲರಿಯ ಮೂಲಕ ಸೋಸಿ. ಸೋಸಿದ ಟೀ ಗೆ ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ಬಿಸಿ ಬಿಸಿಯಾದ ದಾಳಿಂಬೆ ಟೀ ಸವಿಯಲು ಸಿದ್ಧ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!