ಮೇ 7 ರಂದು ಕೇಜ್ರಿವಾಲ್‌ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ: ಸುಪ್ರೀಂ ಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸಾರ್ವತ್ರಿಕ ಚುನಾವಣೆಗಳ ಕಾರಣ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನಿಗೆ ಸಂಬಂಧಿಸಿದಂತೆ ವಾದಗಳನ್ನು ಮೇ 7 ರಂದು ಆಲಿಸಬಹುದು ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ವಿಚಾರಣೆ ನಡೆಸಿತು. ಮಧ್ಯಂತರ ಜಾಮೀನಿನ ಪ್ರಶ್ನೆಯ ಕುರಿತು ವಾದಗಳನ್ನು ಮೇ 7 ರಂದು ಆಲಿಸಬಹುದು ಎಂದು ಪೀಠವು ಹೇಳಿದೆ.

ಪ್ರಕರಣದ ವಿಚಾರಣೆಯನ್ನು ಮಂಗಳವಾರ ಬೆಳಗ್ಗೆಗೆ ಪೋಸ್ಟ್ ಮಾಡುತ್ತೇವೆ. ಚುನಾವಣೆಯ ಕಾರಣದಿಂದ ನಾವು ಮಧ್ಯಂತರ ಜಾಮೀನಿನ ಪ್ರಶ್ನೆಯನ್ನು ಪರಿಗಣಿಸಬಹುದು. ತಾನು ಅಂತಿಮವಾಗಿ ಏನನ್ನೂ ನಿರ್ಧರಿಸಿಲ್ಲ. ವಿಚಾರಣೆಯು ಶೀಘ್ರದಲ್ಲೇ ಮುಕ್ತಾಯಗೊಳ್ಳುವ ಸಾಧ್ಯತೆಯಿಲ್ಲದಿದ್ದರೆ ಅಂತಹ ಮಧ್ಯಂತರ ಪರಿಹಾರವನ್ನು ಪರಿಗಣಿಸಬಹುದು ಎಂದು ವಕೀಲರಿಗೆ ತಿಳಿಸುವುದಾಗಿ ಪೀಠವು ಸ್ಪಷ್ಟಪಡಿಸಿತು.

ಜಾಮೀನು ನೀಡುವುದು ಅಥವಾ ಇಲ್ಲವೇ ಎಂಬುದರ ಕುರಿತು ಏನನ್ನೂ ಹೇಳುತ್ತಿಲ್ಲ. ನಾವು ನೀಡಬಹುದು ಅಥವಾ ನೀಡದೇ ಇರಬಹುದು. ನಾವು ನಿಮಗೆ ಮುಕ್ತವಾಗಿರಬೇಕು. ಏಕೆಂದರೆ ಎರಡೂ ಕಡೆಯವರು ಆಶ್ಚರ್ಯಪಡಬೇಕಾಗಿಲ್ಲ ಎಂದು ಪೀಠವು ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!