ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವ ಪೀಳಿಗೆಯಲ್ಲಿ ಹೃದಯಾಘಾತ ಹೆಚ್ಚಾಗುತ್ತಿದ್ದು, ಮಡಿಕೇರಿಯಲ್ಲಿ ಹೃದಯಾಘಾತಕ್ಕೆ 24ವರ್ಷದ ಯುವತಿ ಪ್ರಾಣಬಿಟ್ಟಿದ್ದಾಳೆ.
ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಕಾಫಿ ಬೆಳೆಗಾರರಾದ ಪೊನ್ನಪ್ಪ ಅವರ ಮಗಳು ನಿಲಿಕಾ ಪೊನ್ನಪ್ಪ (24) ಮೃತರು. ಆಕೆ ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ಕಾಲೇಜು ಮತ್ತು ಬೋಧಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಕರ್ತವ್ಯಕ್ಕೆ ಹೊರಟಾಗ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದೆ.
ಕೂಡಲೇ ಯುವತಿ ನಿಲಿಕಾ ವಾಪಸ್ ತನ್ನ ಕೋಣೆಗೆ ಹೋಗಿ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾಳೆ ಅಷ್ಟೆ. ಯುವತಿ ತಾಯಿ ಹಿಂದಿನಿಂದ ಹೋಗಿ ಏನಾಯಿತು ಎಂದು ಕೇಳುವಷ್ಟರಲ್ಲಿಯೇ ನಿಲಿಕಾ ಮೃತಪಟ್ಟಿದ್ದಾರೆ. ಕೆಲ ಕ್ಷಣದ ಹಿಂದೆ ಉಸಿರಾಡುತ್ತಿದ್ದ ಮಗಳು ಈಗಿಲ್ಲ ಎಂದು ಪೋಷಕರು ಕಣ್ಣೀರಿಟಿದ್ದಾರೆ. ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.