ಕರುಳ ಕುಡಿಯನ್ನು ಬದುಕಿಸಲು ಆನೆಯೊಂದು ಪರದಾಡುತ್ತಿರುವ ಕಣ್ಣೀರಿನ ವಿಡಿಯೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಾಯಿ ಆನೆಯೊಂದು ಸತ್ತ ತನ್ನ ಮರಿಯನ್ನು ಬದುಕಿಸುವ ಯತ್ನ ನೋಡುಗರನ್ನು ಕಣ್ಣೀರಿಡುವಂತೆ ಮಾಡಿದೆ. ಅಸ್ಸಾಂನ ಗೋಶ್ವರ್‌ನಲ್ಲಿ ಮನಕಲಕುವ ಘಟನೆಯ ವಿಡಿಯೋ ವೈರಲ್‌ ಆಗುತ್ತಿದೆ.

ಪ್ರಾಣಿಗಳಿರಲಿ, ಮನುಷ್ಯರಿರಲಿ, ಯಾರಿಗಾದರೂ ತಾಯಿ ತಾಯಿಯೇ.. ತನ್ನ ಮಕ್ಕಳ ಮೇಲೆ ಅಪಾರ ಪ್ರೀತಿಯನ್ನು ಇಟ್ಟಿರುತ್ತಾಳೆ. ಹಾಗೆಯೇ ಈ ವಿಡಿಯೋದಲ್ಲಿ ಆನೆಯೊಂದು ತನ್ನ ಸತ್ತ ಮರಿಯನ್ನು ಬದುಕಿಸಲು ಹಂಬಲಿಸಿದೆ. ಅಸ್ಸಾಂನ ಗೋಶ್ವರ್‌ನಲ್ಲಿ ನಡೆದ ಈ ಘಟನೆ ಎಲ್ಲರ ಮನ ಕಲಕಿತು. ಭಾರತೀಯ ಅರಣ್ಯ ಅಧಿಕಾರಿ ಸುಶಾಂತ್ ನಂದಾ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸತ್ತ ಮಗುವನ್ನು ಎರಡು ಕಿಲೋಮೀಟರ್ ವರೆಗೆ ಹೊತ್ತೊಯ್ದು ನೀರಿನಲ್ಲಿ ಇಟ್ಟು ಬದುಕಿಸಲು ಪ್ರಯತ್ನಿಸಿತು. ಈ ವಿಡಿಯೋ ವೈರಲ್ ಆಗಿದೆ. ತಾಯಿ ಆನೆಯ ರೋದನ ನೋಡುಗರ ಮನ ಕಲಕಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!