May 16, 2026
Saturday, May 16, 2026
spot_img

WEATHER | ರಾಜ್ಯದಲ್ಲೆಲ್ಲ ಬೆಳ್ಳಂಬೆಳಗ್ಗೆಯೇ ನೆತ್ತಿ ಸುಡುವ ಬಿಸಿಲು, ಕರಾವಳಿಗೆ ಗಂಭೀರ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಭಾರೀ ಬಿಸಿಲು ನೆತ್ತಿಸುಡುತ್ತಿದ್ದು, ಕರಾವಳಿ ಭಾಗಕ್ಕೆ ಹವಾಮಾನ ಇಲಾಖೆ ಸೀರಿಯಸ್‌ ಎಚ್ಚರಿಕೆ ನೀಡಿದೆ.

ಕರಾವಳಿ ಭಾಗಕ್ಕೆ ಮುಂದಿನ ಮೂರು ದಿನಗಳು ಹೀಟ್‌ ವೇವ್‌ ಆಗಮಿಸಲಿದ್ದು, ಜನರು ಎಚ್ಚರಿಕೆಯಿಂದ ಇರಿ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯ ಈಗಾಗಲೇ ಕಾದ ಹೆಂಚಿನಂತಾಗಿದೆ. ಹೀಟ್‌ವೇವ್‌ನಿಂದ ಜನ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲಾಗದೆ ಹೈರಾಣಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಬೇರೆ ಜಿಲ್ಲೆಗಳಿಂತ ಜಾಸ್ತಿ ಸಮಸ್ಯೆ ಎದುರಾಗಿದ್ದು, ಆರೋಗ್ಯದ ಕಡೆ ಗಮನಕೊಡುವ ಅವಶ್ಯಕತೆ ಇದೆ.

ಈ ಬೇಸಿಗೆ ಹೀಟ್‌ನ್ನು ಬೀಟ್‌ ಮಾಡಲು ಹಗಲಿನಲ್ಲಿ ಅನಾವಶ್ಯಕ ಓಡಾಟ ತಪ್ಪಿಸಿ, ಛತ್ರಿ, ಕೋಟ್‌, ಟೋಪಿಗಳ ಸಹಾಯ ಪಡೆಯಿರಿ. ದಿನಕ್ಕೆ ಮೂರರಿಂದ ನಾಲ್ಕು ಲೀಟರ್‌ ನೀರು ಹಾಗೂ ನೀರಿನಂಶ ಇರುವ ಹಣ್ಣುಗಳನ್ನು ಸೇವನೆ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !