ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರೆಜಿಲ್‌ನ ಆಗ್ನೇಯ ರಾಜ್ಯದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ವಾರದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ.
ಬ್ರೆಜಿಲ್‌ನ ಮಿನಾಸ್ ಗೆರೈಸ್ ರಾಜ್ಯದಲ್ಲಿ ಭೂಕುಸಿತ ಉಂಟಾಗಿದ್ದು,12 ಮಂದಿ ಮೃತಪಟ್ಟಿದ್ದಾರೆ. ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಅಣೆಕಟ್ಟೆಗಳು ತುಂಬಿವೆ.
ಪ್ರವಾಹದಿಂದಾಗಿ ಈಗಾಗಲೇ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, 17 ಸಾವಿರ ಮಂದಿ ನೆಲೆ ಕಳೆದುಕೊಂಡಿದ್ದಾರೆ.
ಆಗ್ನೇಯ ರಾಜ್ಯದಲ್ಲಿ ಒಂದೇ ಕುಟುಂಬದ ಐದು ಮಂದಿ ಮೃತಪಟ್ಟಿದ್ದಾರೆ. ಸಾವೊ ಗೊನಾಲೊ ಡೊ ರಿಯೊ ಅಬೈಕ್ಸೋದಲ್ಲಿ 10 ವರ್ಷದ ಬಾಲಕಿ ಮನೆಯಲ್ಲಿ ಮಲಗಿದ್ದಾಗ ಗೋಡೆ ಬಿದ್ದು ಮೃತಪಟ್ಟಿದ್ದಾಳೆ. ಕಾರ್ಟಿಂಗಾದಲ್ಲಿ ಭೂಕುಸಿತಕ್ಕೆ ಮೂರು ಮಂದಿ ಮೃತಪಟ್ಟಿದ್ದಾರೆ. ಎರ್ವಾಲಿಯಾದಲ್ಲಿ ಬಾರ್‌ನಲ್ಲಿದ್ದ ಯುವಕನ ಮೇಲೆ ಗೋಡೆ ಕುಸಿತು ಆತ ಮೃತಪಟ್ಟಿದ್ದಾನೆ ಎಂದು ನಾಗರಿಕ ರಕ್ಷಣಾ ಪ್ರಾಧಿಕಾರ ತಿಳಿಸಿದೆ.