Friday, June 2, 2023

Latest Posts

ಚೀನಾದ ಈ ನಗರಕ್ಕೆ ಕಠಿಣ ನಿರ್ಬಂಧ: ಸಿಟಿಯಿಂದ ಹೊರಬರಲು 279 ಚೆಕ್ ಪೋಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಡೀ ವಿಶ್ವದಲ್ಲಿ ಈಗ ರೂಪಾಂತರಿ ಸೋಂಕು ಒಮಿಕ್ರಾನ್‌ ನ ಹಾವಳಿ ಹೆಚ್ಚಾಗಿದೆ. ಅದರಂತ ಚೀನಾದಲ್ಲೂ ಕೂಡ ಒಮಿಕ್ರಾನ್‌ ಭೀತಿ ಏದುರಾಗಿದೆ.
ನಗರವೊಂದಕ್ಕೆ ಚೀನಾ ಕಠಿಣ ನಿರ್ಬಂಧಗಳನ್ನು ಹೇರಿದೆ. ರಾಜಧಾನಿ ಬೀಜಿಂಗ್‌ ನಿಂದ 100 ಕಿ.ಮೀ ದೂರದಲ್ಲಿರುವ ಟಿಯಾಂಜಿನ್‌ ನಗರಕ್ಕೆ ಈಗ ಭಾರೀ ನಿಬಂಧನೆಗಳನ್ನು ಹಾಕಲಾಗಿದೆ.
ಈ ನಗರದಿಂದ ಯಾರೇ ಹೊರ ಬರಬೇಕಾದರೂ ಬರೋಬ್ಬರಿ 279 ಚೆಕ್‌ ಪೋಸ್ಟ್‌ ಗಳನ್ನು ದಾಟಿ ಸಾಗಬೇಕು ಎಂದು ಸರ್ಕಾರ ತಾಕೀತು ಮಾಡಿದೆ. ಅಷ್ಟೇ ಅಲ್ಲ ಈ ನಗರದಲ್ಲಿ ಸಾಮೂಹಿಕ ಕೋವಿಡ್‌ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ. ಸೋಂಕಿನ ಲಕ್ಷಣ ಅಥವಾ ಸೋಂಕಿತರನ್ನು ಐಸೊಲೇಟ್‌ ಮಾಡಲಾಗುತ್ತಿದೆ.
ಈ ನಗರದಲ್ಲಿ 1.4 ಕೋಟಿ ಜನರು ವಾಸವಿದ್ದು, ಈಗಾಗಲೇ 49 ಒಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ. ಇನ್ನು ರಾಜಧಾನಿಗೆ ಸಮೀಪದಲ್ಲಿರುವ ನಗರವಾದ್ದರಿಂದ ಇಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಟಿಯಾಂಜಿನ್‌ ನಗರದಿಂದ ಹೊರ ಬರಲು ನಾಗರಿಕರು ಕೊರೋನಾ ನೆಗೆಟಿವ್‌ ವರದಿ ಪಡೆಯಬೇಕಿದೆ ಜತೆಗೆ 279 ಚೆಕ್‌ ಫೋಸ್ಟ್‌ ಇರಿಸಲಾಗಿದ್ದು, ಎಲ್ಲರ ಮೇಲೆ ನಿಗಾ ವಹಿಸಲು ಸರ್ಕಾರ ಸೂಚಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!