ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು-ಬೆಂಗಳೂರು ರೈಲು ಮಾರ್ಗದ ಬಾರೀ ಮಳೆಯಿಂದಾಗಿ ಶನಿವಾರ ಸಂಜೆ ಗಂಟೆ ೪:೪೦ರ ವೇಳೆ ಸಿರಿಬಾಗಿಲು-ಯಡಕುಮಾರಿ, ಯಡಕುಮಾರಿ-ಕಡಗರವಳ್ಳಿ ಮತ್ತು ಕಡಗರವಳ್ಳಿ-ಡೋಣಿಗಲ್ ವಿಭಾಗಗಳ ನಡುವಿನ ಕೆಲವೆಡೆ ಭೂಕುಸಿತ ಉಂಟಾಗಿ ಮಣ್ಣು, ಬಂಡೆಗಳು ರೈಲು ಮಾರ್ಗಕ್ಕೆ ಬಿದ್ದಿದೆ. ಪರಿಣಾಮ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಘಟನೆಗೆ ಸಂಬಂಧಿಸಿದಂತೆ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ. ಭೂಕುಸಿತ ಉಂಟಾದ ತಕ್ಷಣ ರೈಲು ಇಲಾಖೆ ದುರಸ್ಥಿ ಕಾರ್ಯವನ್ನು ಆರಂಭಿಸಿದೆ.
ಪ್ರಾಕೃತಿಕ ವಿಕೋಪದಿಂದಾಗಿ ಹಳಿಯ ಮೇಲೆ ಮಣ್ಣು ಕುಸಿತಗೊಂಡ ಕಾರಣ ಈ ಭಾಗದಲ್ಲಿನ ಸಂಚರಿಸುವ ರೈಲುಗಳು ಮಾರ್ಗ ಬದಲಾವಣೆ ಮಾಡಿ ಸಂಚರಿಸಲಿದೆ. ಪ್ರಯಾಣಿಕರು ಸಹಕರಿಸಬೇಕು ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಾಡಿ ತಿಳಿಸಿದ್ದಾರೆ.
ಸಂಚಾರ ಸ್ಥಗಿತ:
ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಮೊದಲಿಗೆ ಸಂಜೆ ಬಂಟ್ವಾಳದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಕಲೇಶಪುರದಿಂದ ಘಟನೆ ಮಾಹಿತಿ ಬಂದ ತಕ್ಷಣ ಕಾರ್ಯಾಚರಣೆ ತಂಡ ಘಟನಾ ಸ್ಥಳಕ್ಕೆ ತೆರಳಿ ದುರಸ್ತಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಜನರಲ್ ಮ್ಯಾನೇಜರ್ ಮುಕುಲ್ ಸರನ್ ಮಾಥುರ್, ಹಚ್ಚುವರಿ ಜನರಲ್ ಮ್ಯಾನೇಜರ್ ಕೆ.ಎಸ್. ಜೈನ್ ಇಲಾಖೆಗಳ ಪ್ರಧಾನ ಮುಖ್ಯಸ್ಥರು ಪರಿಸ್ಥಿತಿಯನ್ನು ಗಮನಿಸುತ್ತಿದ್ದು ಮತ್ತು ಪುನಃ ಸ್ಥಾಪನೆ ಕಾರ್ಯಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಘಟನೆಯಿಂದ ಕೂಡಲೇ ಆ ಮಾರ್ಗದ ಮೂಲಕ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ರದ್ದು ಮಾಡಲಾಯಿತು. ಘಟನಾ ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು, ಇಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ದುರಸ್ತಿ ಕಾರ್ಯ ಆರಂಭಿಸಿದ್ದಾರೆ.ಸಕಲೇಶಪುರದಿಂದ ದುರಸ್ಥಿ ಕಾಮಗಾರಿಗಾಗಿ ಮೆಟೀರಿಯಲ್ ರೈಲು ದೋಣಿಗಲ್‌ಗೆ ಪ್ರಯಾಣಿಸಿದೆ.ಅಲ್ಲದೆ ದುರಸ್ಥಿ ಕಾರ್ಯ ನಡೆಯುತ್ತಿದೆ.
ಮಾರ್ಗ ಬದಲಾವಣೆ:
ರೈಲು ಮಾರ್ಗಕ್ಕೆ ಸುಬ್ರಹ್ಮಣ್ಯ ರೋಡ್ – ಸಕಲೇಶಪುರ ನಡುವೆ ಭೂಕುಸಿತ ಹಿನ್ನಲೆಯಲ್ಲಿ ಹಲವು ರೈಲು ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ.
ರೈಲು ಸಂಖ್ಯೆ ೦೭೩೭೮ ಮಂಗಳೂರು ಸೆಂಟ್ರಲ್ – ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಶನಿವಾರ ಪ್ರಯಾಣವನ್ನು ತೋಕೂರು, ಕಾರವಾರ, ಮಡಗಾಂವ್, ಲೋಂಡಾ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ಮೂಲಕ ಸಂಚರಿಸಲಿದೆ.ಬಂಟವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ, ಸಕಲೇಶಪುರ ರಸ್ತೆ, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಬ್ಯಾಡಗಿ, ಹಾವೇರಿ ಮತ್ತು ಯೆಲ್ವಿಗಿ ಮಾರ್ಗದಲ್ಲಿ ರೈಲು ಸಂಚಾರ ಇರುವುದಿಲ್ಲ.
ರೈಲು ಸಂಖ್ಯೆ ೧೬೫೮೬ ಮುರ್ಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್, ಶನಿವಾರ ಪ್ರಾರಂಭವಾಗುವ ಪ್ರಯಾಣವನ್ನು ಕಾಸರಗೋಡು, ಶೋರನೂರು, ಪಾಲಕ್ಕಾಡ್, ಸೇಲಂ ಮತ್ತು ಜೋಲಾರ್‌ಪೇಟೆ ಮೂಲಕ ಸಂಚರಿಸಲಿದೆ. ಬಂಟವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ, ಸುಬ್ರಹ್ಮಣ್ಯ ರಸ್ತೆ, ಹಸಕಪುರಂ, ಸುಬ್ರಹ್ಮಣ್ಯ, ಕೃ?ರಾಜನಗರ, ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ, ಕೆಂಗೇರಿ, ಕೆಸಿಆರ್ ಬೆಂಗಳೂರು ಮತ್ತು ಬೆಂಗಳೂರು ಕ್ಯಾಂಟ್ ಸಂಚಾರ ಇರುವುದಿಲ್ಲ.
ರೈಲು ಸಂಖ್ಯೆ. ೧೬೫೧೨ ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್, ಶನಿವಾರದ ಪ್ರಯಾಣವನ್ನು ಕಾಸರಗೋಡು, ಶೋರನೂರು, ಪಾಲಕ್ಕಾಡ್, ಸೇಲಂ ಮತ್ತು ಜೋಲಾರ್‌ಪೇಟ್ಟೈ ಮೂಲಕ ಸಂಚರಿಲಿದೆ. ಬಂಟವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ, , ಸಕಲೇಶಪುರ, ಶ್ರವಣಬೆಳಗೊಳ, ಬಿ.ಜಿ.ನಗರ, ಕುಣಿಗಲ್, ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ಮಾರ್ಗದಲ್ಲಿ ಸಂಚಾರ ಇರುವುದಿಲ್ಲ.
ರೈಲು ಸಂಖ್ಯೆ ೧೬೫೯೬ ಕಾರವಾರ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್, ಶನಿವಾರ ಪ್ರಾರಂಭವಾಗುವ ಪ್ರಯಾಣವನ್ನು ಮಂಗಳೂರು ಜಂ., ಕಾಸರಗೋಡು, ಶೋರನೂರು, ಪಾಲಕ್ಕಾಡ್, ಸೇಲಂ ಮತ್ತು ಜೋಲಾರ್‌ಪೇಟೆ ಮೂಲಕ ಸಂಚರಿಲಿದೆ. ಬಂಟವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ಮಾರ್ಗದಲ್ಲಿ ಸಂಚಾರ ಇರುವುದಿಲ್ಲ ಎಂದು ರೈಲ್ವೇ ಇಲಾಖೆ ತಿಳಿಸಿದೆ.