ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಜೋರು ಮಳೆ ಸುರಿಯುತ್ತಿದ್ದು, ಸತತ ಮಳೆಗೆ ಮನೆ ಕುಸಿದು ಬಿದ್ದ ಪರಿಣಾಮ ವೃದ್ಧೆ ಹಾಗೂ 20 ದಿನದ ನವಜಾತ ಶಿಶು ಮೃತಪಟ್ಟಿದೆ.
ಫಕೀರಮ್ಮ ಹಾಗೂ ಅವರ 20 ದಿನದ ಮೊಮ್ಮಗಳು ಮಲಗಿದ್ದ ವೇಳೆ ಮನೆ ಕುಸಿದು ಬಿದ್ದಿದೆ, ಮಗುವಿನ ತಾಯಿ ಕನಕಮ್ಮಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾರೀ ಮಳೆಯ ಜೊತೆ ಆಲಿಕಲ್ಲು ಮಳೆಯೂ ಬೀಳುತ್ತಿದ್ದು, ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.