ಹೊಸದಿಗಂತ ವರದಿ,ಮಡಿಕೇರಿ:
ಪೊನ್ನಂಪೇಟೆ ವ್ಯಾಪ್ತಿಯ ಕುಟ್ಟ ಮತ್ತು ಟಿ.ಶೆಟ್ಟಿಗೆರಿ ವ್ಯಾಪ್ತಿಯಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಈ ವ್ಯಾಪ್ತಿಯ ಶಾಲೆಗಳಿಗೆ ಜು.25ರಂದು ರಜೆ ನೀಡಲು ವೀರಾಜಪೇಟೆ ಬಿಇಒ ಅವರ ಮನವಿ ಆಧರಿಸಿ, ಈ ಭಾಗದ 40 ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಡಿಡಿಪಿಐ ರಂಗಧಾಮಪ್ಪ ಅವರು ತಿಳಿಸಿದ್ದಾರೆ.